ADVERTISEMENT

ವಿದ್ಯಾರ್ಥಿಗಳ ಆಕ್ರೋಶ; ಪ್ರತಿಭಟನೆ

ಬಸ್‌ ಹತ್ತುವಾಗ ಬಿದ್ದು ಗಾಯಗೊಂಡ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 9:29 IST
Last Updated 13 ಫೆಬ್ರುವರಿ 2020, 9:29 IST

ಮೈಸೂರು: ನಗರದ ಗದ್ದಿಗೆ ಮುಖ್ಯ ರಸ್ತೆಯಲ್ಲಿ ಬುಧವಾರ ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದ ವಿದ್ಯಾರ್ಥಿಯ ಕಾಲಿನ ಮೇಲೆ, ಬಸ್‌ನ ಚಕ್ರ ಹರಿದು ಗಾಯಗೊಂಡಿದ್ದಾನೆ.

ಮಹಾರಾಜ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿ ಕಿರಣ್ ಗಾಯಗೊಂಡಾತ.

ಕಾಲೇಜಿಗೆ ಹೋಗುವುದಕ್ಕಾಗಿ ಈತ ಬಸ್ ಹತ್ತಲು ಮುಂದಾಗಿದ್ದಾನೆ. ಈ ವೇಳೆ ಬಸ್ ಏಕಾಏಕಿ ಚಲಿಸಿದ್ದು ಕಿರಣ್‌ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್‌ನ ಹಿಂಬದಿಯ ಚಕ್ರ ಈತನ ಕಾಲಿನ ಮೇಲೆ ಹರಿದಿದೆ.

ADVERTISEMENT

ಘಟನೆಗೆ ಸ್ಥಳದಲ್ಲಿಯೇ ವಿದ್ಯಾರ್ಥಿಗಳು ಬಸ್‌ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರಿಹಾರಕ್ಕಾಗಿ ಆಗ್ರಹಿಸಿದರು. ವಿಷಯ ತಿಳಿದೊಡನೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು. ಕೆ.ಆರ್. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಎಸ್‌ಆರ್‌ಟಿಸಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಿದೆ.

₹ 31 ಲಕ್ಷ ವಂಚನೆ: ದೂರು
ನಗರದಲ್ಲಿರುವ ಚೋಳಮಂಡಲಮ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಅಂಡ್‌ ಫೈನಾನ್ಸ್ ಕಂಪನಿ ಪರವಾಗಿ, ಗ್ರಾಹಕರಿಂದ ನಿತ್ಯ ಹಣವನ್ನು ಸಂಗ್ರಹಿಸುತ್ತಿದ್ದ ಸೋಮೇಶ್‌ ಎಂಬಾತ, ₹ 30,96,901 ನಗದನ್ನು ವಿವಿಧ ಬ್ಯಾಂಕ್‌ಗಳಿಗೆ ಜಮಾ ಮಾಡದೆ ನಾಪತ್ತೆಯಾಗಿದ್ದಾನೆ ಎಂದು ಕಂಪನಿಯ ಮ್ಯಾನೇಜರ್ ರಮೇಶ್‌ ಬಾಬು ಎಂಬುವರು ಠಾಣೆಗೆ ದೂರು ನೀಡಿದ್ದಾರೆ ಎಂದು ದೇವರಾಜ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.