ADVERTISEMENT

ಆರೋಗ್ಯ ತಪಾಸಣೆಗೆ ಒಳಗಾಗಿ ಶಕ್ತಿಧಾಮಕ್ಕೆ ವಾಪಸ್ಸಾದ ನಟ ಶಿವ ರಾಜಕುಮಾರ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 7:26 IST
Last Updated 20 ಏಪ್ರಿಲ್ 2022, 7:26 IST
ನಟ ಶಿವ ರಾಜಕುಮಾರ್
ನಟ ಶಿವ ರಾಜಕುಮಾರ್   

ಮೈಸೂರು: ನಟ ಶಿವ ರಾಜಕುಮಾರ್ ಅವರು ಇಲ್ಲಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಬುಧವಾರ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾದರು. ನಂತರ ಅವರು ಶಕ್ತಿಧಾಮ ಸಂಸ್ಥೆಗೆ ವಾಪಸ್ ತೆರಳಿದ್ದಾರೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಶಕ್ತಿಧಾಮದ ಖಜಾಂಚಿ ಸುಮನಾ, 'ಶಿವ ರಾಜಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬುದು ಸುಳ್ಳು ಸುದ್ದಿ. ಅವರು ಸಾಮಾನ್ಯ ತಪಾಸಣೆಗೆ ಒಳಗಾಗಿ ವಾಪಸ್ ಶಕ್ತಿಧಾಮಕ್ಕೆ ಬಂದು‌ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT