ಮೈಸೂರು: ‘ಮ್ಯಾಕ್ಸ್’ ಚಲನಚಿತ್ರ ಯಶಸ್ಸಿನ ಸಂಭ್ರಮದಲ್ಲಿ ಇರುವ ನಟ ಕಿಚ್ಚ ಸುದೀಪ್ ಭಾನುವಾರ ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವಿಗೆ ಪೂಜೆ ಸಲ್ಲಿಸಿದರು.
ನಿರ್ಮಾಪಕ ಕಾರ್ತಿಕ್ ಗೌಡ ಜೊತೆಗೂಡಿ ಬೆಳಿಗ್ಗೆ ಬೆಟ್ಟಕ್ಕೆ ಧಾವಿಸಿದ ಸುದೀಪ್, ದೇವರಲ್ಲಿ ಪ್ರಾರ್ಥಿಸಿದರು. ಸುದೀಪ್ ಬಂದ ಸುದ್ದಿ ಕೇಳಿ ಬೆಟ್ಟಕ್ಕೆ ಅವರ ಅಭಿಮಾನಿಗಳ ದಂಡು ಹರಿದುಬಂದಿತ್ತು. ಶಿಳ್ಳೆ–ಜೈಕಾರ ಹಾಕುತ್ತಿದ್ದ ಅಭಿಮಾನಿಗಳಿಗೆ ಸುದೀಪ್ ಕೈ ಬೀಸುತ್ತಲೇ ಕೃತಜ್ಞತೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದು, ಅವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.