ADVERTISEMENT

ಮೈಸೂರು: ಕೃಷಿ ಕ್ಷೇತ್ರದಲ್ಲಿ ಬಳಸುವ ಡ್ರೋನ್‌ಗಳ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2022, 13:54 IST
Last Updated 20 ಮೇ 2022, 13:54 IST
   

ಮೈಸೂರು: ಬೆಳೆಗಳಿಗೆ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಿಸುವಂತಹ ಡ್ರೋನ್‌ ಪ್ರಾತ್ಯಕ್ಷಿಕೆಯನ್ನು ಕೇಂದ್ರ ಸಚಿವರಾದ ಡಾ.ಜಿತೇಂದ್ರ ಸಿಂಗ್ ಹಾಗೂ ಶೋಭಾ ಕರಾಂದ್ಲಾಜೆ ಅವರು ಶುಕ್ರವಾರ ಮೈಸೂರಿನ ಸಿಎಫ್‌ಟಿಆರ್‌ಐ ಆವರಣದಲ್ಲಿ ವೀಕ್ಷಿಸಿದರು.

ಈ ಡ್ರೋನ್‌ಗಳಿಂದ 10 ನಿಮಿಷದ ಅವಧಿಯಲ್ಲಿ ಬೆಳೆಗಳಿಗೆ ಗೊಬ್ಬರ ಹಾಗೂ ಕೀಟನಾಶಕಗಳನ್ನು ಸಿಂಪಡಿಸಬಹುದು ಎಂದು ಚೆನ್ನೈನ ಗರುಡ ಏರೋಸ್ಪೇಸ್ ಕಂಪನಿಯ ರೈಸ್ ತಿಳಿಸಿದರು.

ಇದಕ್ಕೂ ಮುನ್ನ ಇಬ್ಬರು ಸಚಿವರುಇಲ್ಲಿ ಲಘು ಉದ್ಯೋಗ ಭಾರತಿ– ಕರ್ನಾಟಕ, ಐಎಂಎಸ್‌ ಫೌಂಡೇಶನ್‌ ವತಿಯಿಂದ ಸಿಎಸ್‌ಐಆರ್‌– ಸಿಎಫ್‌ಟಿಆರ್‌ಐ ಸಹಯೋಗದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ‘ಟೆಕ್‌ ಭಾರತ್–2022’ ತಂತ್ರಜ್ಞಾನ ವಸ್ತುಪ್ರದರ್ಶನ ಮತ್ತು ಸಮಾವೇಶದಲ್ಲಿ ಭಾಗಿಯಾದರು‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.