ಅಂಬೇಡ್ಕರ್ ಚಿತ್ರಾವಳಿಯ ಭಿತ್ತಿಫಲಕವನ್ನು ಪ್ರೊ.ಸಂತೋಷ್‌ನಾಯಕ್–ಶಿಲ್ಪಾ ದಂಪತಿ ತಮ್ಮ ಮಗಳು ಸರಸ್ವತಿ ಅವರೊಂದಿಗೆ ವೀಕ್ಷಿಸಿದರು
ಮೈಸೂರು: ಬೌದ್ಧ ಸಮ್ಮೇಳನದಲ್ಲಿ ಅಂಬೇಡ್ಕರ್ ಜೀವನ ಕಥಾನಕವನ್ನು ಹೇಳುವ ಬೃಹತ್ ಭಿತ್ತಿಚಿತ್ರ ಎಲ್ಲರ ಗಮನ ಸೆಳೆದಿತ್ತು. ಅಂಬೇಡ್ಕರ್ ಅವರ ಜೀವನದ ವಿವಿಧ ಘಟ್ಟಗಳನ್ನು ಪ್ರತಿನಿಧಿಸುವ 45 ಫೋಟೋಗಳನ್ನು ಸೇರಿಸಿ ಮಾಡಿದ ಭಿತ್ತಿ ಫಲಕವು ಆಕರ್ಷಣೆಯ ಕೇಂದ್ರವಾಗಿತ್ತು. ಹಲವರು ಅದರ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದುದು ವಿಶೇಷವಾಗಿತ್ತು.
ಬಾಲಕ ಅಂಬೇಡ್ಕರ್, ದೇಶದ ಮೊದಲ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಅಂಬೇಡ್ಕರ್, ಸೈಮನ್ ಕಮಿಷನ್ ಮುಂದೆ ತಮ್ಮ ವಾದ ಮಂಡಿಸಲು ತೆರಳುತ್ತಿರುವ ಅಂಬೇಡ್ಕರ್, ಸಮಾಜ ಸಮತಾ ಸಂಘದ ಪ್ರತಿನಿಧಿಗಳೊಂದಿಗೆ, ಅಂಬೇಡ್ಕರ್ ಅಂತಿಮ ಯಾತ್ರೆ ಹೀಗೆ ವೈವಿಧ್ಯಮ ಫೋಟೋಗಳುಳ್ಳ ಫಲಕ ವಿಶೇಷವಾಗಿದ್ದರೂ ಫೋಟೋಗಳ ಕುರಿತ ವಿವರಗಳಿಲ್ಲದಿರುವುದು ದೊಡ್ಡ ಕೊರತೆಯಾಗಿ ಕಂಡಿತು.
‘ಫೋಟೋಗಳ ಜೊತೆಗೆ ಅವುಗಳ ಕುರಿತ ಚಾರಿತ್ರಿಕ ಮಾಹಿತಿಯೂ ಇದ್ದಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು’ ಎಂದು ಪ್ರೊ.ಸಂತೋಷನಾಯ್ಕ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.