ಮೈಸೂರು: ಇಲ್ಲಿನ ಹೆರಿಟೇಜ್ ಹೌಸ್‌ನಲ್ಲಿ ಗ್ಯಾಲರಿ ಕ್ರೆಸೆಂಟ್ ಸಂಸ್ಥೆಯು ‘ಅನಿಸಿಕೆ’ ಶೀರ್ಷಿಕೆಯಲ್ಲಿ ಶನಿವಾರದಿಂದ ಆಯೋಜಿಸಿರುವ ಚಿತ್ರಪ್ರದರ್ಶನವನ್ನು ನೂರಾರು ಕಲಾಪ್ರೇಮಿಗಳು ಆಸಕ್ತಿಯಿಂದ ವೀಕ್ಷಿಸಿದರು.
ಕಲಾವಿದರಾದ ಬಾಲು ಭಾಸ್ಕರ್, ಗೌತಮಿ ಕಲ್ಚಾರ್, ಜ್ಯೋತಿ ಮಚಿಗಡ್, ನೂತನ್ ರಾಜ್, ಪೂಜಾ ಶರ್ಮಾ, ಶಿವರಾಜ್ ಎಂ., ಸುರೇನಾ ಶೆಟ್ಟಿ ಮತ್ತು ಸುವರ್ಣ ಮಾಗಜಿ ಅವರು ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸೃಜನಶೀಲ ಪ್ರಕ್ರಿಯೆಗಳ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.
‘ಚಿತ್ರಪ್ರದರ್ಶನವು ಆಗಸ್ಟ್ 16ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ನಡೆಯಲಿದ್ದು, ಕಲಾಪ್ರೇಮಿಗಳು ಆಗಮಿಸಬೇಕು’ ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.