ಮೈಸೂರು: ಇಲ್ಲಿನ ಕಲಾಮಂದಿರದ ನೌಕರರಿಗೆ 5 ತಿಂಗಳಿಂದ ಸಂಬಳವಾಗಿಲ್ಲ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಹೇಳುತ್ತಿದ್ದಂತೆಯೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸಿಡಿಮಿಡಿಗೊಂಡರು.
ಸಚಿವರು ಗುರುವಾರ ರಂಗಾಯಣಕ್ಕೆ ಭೇಟಿ ನೀಡಿ, ಕಲಾವಿದರ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ, ನಿರ್ದೇಶಕರು ಈ ವಿಚಾರವನ್ನು ಅವರ ಗಮನಕ್ಕೆ ತಂದರು.
‘ಕಲಾಮಂದಿರದ ನೌಕರರು 5 ತಿಂಗಳುಗಳಿಂದ ಸಂಬಳ ಇಲ್ಲದೇ ಪರದಾಡುತ್ತಿದ್ದಾರೆ. ನೆನ್ನೆ ನನ್ನ ಕಚೇರಿಗೆ ಬಂದು ಮನವಿ ಮಾಡಿದರು’ ಎಂದು ಹೇಳುತ್ತಿರುವಾಗ ಅವರ ಮಾತನ್ನು ತಡೆದ ಸಚಿವರು, ‘ಯಾವುದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿ. ಈ ವಿಷಯವನ್ನು ನನ್ನ ಕಚೇರಿಗೆ ಬಂದು ಮಾತನಾಡಿ. ರಂಗಾಯಣದ ನಿರ್ದೇಶಕರಾಗಿದ್ದೀರಿ; ಅಷ್ಟೂ ಗೊತ್ತಾಗುವುದಿಲ್ಲವೇ?’ ಎಂದು ರೇಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.