ADVERTISEMENT

ಮಕ್ಕಳಿಗೆ ಚಿತ್ರಕಲಾ ಶಿಬಿರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 11:51 IST
Last Updated 23 ಮಾರ್ಚ್ 2023, 11:51 IST

ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಚಿತ್ರಕಲಾ ಶಿಬಿರವನ್ನು ಏ.5ರಿಂದ 26ರವರೆಗೆ ಶಿವರಾತ್ರಿ ರಾಜೇಂದ್ರ ವೃತ್ತದ ಜೆಎಸ್‌ಎಸ್ ಬಾಲಜಗತ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಮೂರು ವಿಭಾಗಗಳಲ್ಲಿ ನಡೆಯುವ ಶಿಬಿರದಲ್ಲಿ 6ರಿಂದ 9 ವರ್ಷ, 10ರಿಂದ 13 ವರ್ಷ ಮತ್ತು 14ರಿಂದ 16 ವರ್ಷದ ಮಕ್ಕಳಿಗೆ ಪ್ರತ್ಯೇಕ ಗುಂಪುಗಳಲ್ಲಿ ತರಬೇತಿ ನೀಡಲಾಗುವುದು. ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದ್ದು, ವಾರಕ್ಕೆ ಒಂದು ದಿನ ಹಿರಿಯ ಕಲಾವಿದರಿಂದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದು. ಒಂದು ದಿನ ನಿಸರ್ಗ ಚಿತ್ರ ಬಿಡಿಸುವ ಸಲುವಾಗಿ ಪ್ರವಾಸವನ್ನು ಏರ್ಪಡಿಸಲಾಗುವುದು. ಮಕ್ಕಳು ರಚಿಸಿದ ಚಿತ್ರಗಳ ಪ್ರದರ್ಶನವನ್ನು ಶಿಬಿರದ ಕೊನೆಯಲ್ಲಿ ಏರ್ಪಡಿಸಿ ಉತ್ತಮ ಚಿತ್ರಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಪಾಲ್ಗೊಂಡ ಎಲ್ಲರಿಗೂ ಪ್ರಶಂಸಾ ಪತ್ರ ನೀಡಲಾಗುವುದು. ಅರ್ಜಿ ಸಲ್ಲಿಸಲು ಏ.4 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 2441370 / ಮೊ.ಸಂಖ್ಯೆ: 9686677503 ಸಂಪರ್ಕಿಸಬಹುದು ಎಂದು ಸಂಚಾಲಕ ಎಸ್.ಎಂ.ಜಂಬುಕೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಟ್ಟರಾಜ-ಪಂಚಾಕ್ಷರಿ ಸಂಗೀತೋತ್ಸವ 26ರಂದು
ಮೈಸೂರು:
ಸ್ವರಸಂಕುಲ ಸಂಗೀತ ಸಭಾದಿಂದ ಮಾರ್ಚ್ 26ರಂದು ಸಂಜೆ 5.30ರಿಂದ ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ‘ಗಾನಯೋಗಿ ಪುಟ್ಟರಾಜ-ಪಂಚಾಕ್ಷರಿ ಸಂಗೀತೋತ್ಸವ’ವನ್ನು ಆಯೋಜಿಸಲಾಗಿದೆ.

ADVERTISEMENT

ವಿದುಷಿ ಸಂಜನಾ ಕೌಶಿಕ್ ಮತ್ತು ಕೋಲ್ಕತ್ತಾದ ಪಂ.ಬೃರಜೇಶ್ವರ್ ಮುಖರ್ಜಿ ಅವರಿಂದ ಹಿಂದೂಸ್ತಾನಿ ಗಾಯನ ಕಛೇರಿಯನ್ನು ಏರ್ಪಡಿಸಲಾಗಿದೆ. ಶ್ರೀರಾಮ್ ಭಟ್ ಹಾರ್ಮೋನಿಯಂ, ಭೀಮಾಶಂಕರ್ ಭಿದನೂರು ತಬಲಾದಲ್ಲಿ, ವೀರಭದ್ರಯ್ಯ ಹಿರೇಮಠ ಹಾರ್ಮೋನಿಯಂ ಮತ್ತು ರಮೇಶ್ ಧನ್ನೂರ್ ತಬಲಾದಲ್ಲಿ ಸಹಕಾರ ನೀಡಲಿದ್ದಾರೆ. ಉಚಿತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 6364676005 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಶಿವಾನುಭವ ದಾಸೋಹ ಮಾರ್ಚ್‌ 26ರಂದು
ಮೈಸೂರು
: ಜೆಎಸ್‌ಎಸ್ ಮಹಾವಿದ್ಯಾಪೀಠದ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಮಾರ್ಚ್‌ 25ರಂದು ಸಂಜೆ 6ಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್‌ ನಗರ 2ನೇ ಹಂತದ ನಂ.263ರಲ್ಲಿ ಶಿವಾನುಭವ ದಾಸೋಹ ಮಾಲಿಕೆಯ 299ನೇ ಕಾರ್ಯಕ್ರಮವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಚ್‌.ಎಂ.ಕಲಾಶ್ರೀ ‘ಸಮಾನತೆಯ ಹರಿಕಾರ ದೇವರ ದಾಸಿಮಯ್ಯ’ ಕುರಿತು ಉಪನ್ಯಾಸ ನೀಡಲಿದ್ದಾರೆ. ರಂಗಕರ್ಮಿ ಎಚ್‌.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.