ADVERTISEMENT

ಬೆಟ್ಟದಪುರ: ಆಂಬುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನನ

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:04 IST
Last Updated 17 ಮೇ 2025, 15:04 IST
ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ನಿವಾಸಿ ಕೆ.ಶೃತಿ ಎಂಬವರು  ಆಂಬುಲನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವುದು
ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ನಿವಾಸಿ ಕೆ.ಶೃತಿ ಎಂಬವರು  ಆಂಬುಲನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವುದು   

ಬೆಟ್ಟದಪುರ: ಕಣಗಾಲು ಗ್ರಾಮದ ಗರ್ಭಿಣಿ 108–ಆಂಬುಲನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

ಕಣಗಾಲು ಗ್ರಾಮದ ಕುಮಾರ  ಎಂಬವರ ಪತ್ನಿ ಕೆ.ಶೃತಿ ಅವರಿಗೆ ಶುಕ್ರವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು  ಆಂಬುಲನ್ಸ್‌ನಲ್ಲಿ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಈಚೂರು ಗ್ರಾಮದ ಬಳಿ ವಾಹನದಲ್ಲೇ ಹೆರಿಗೆ ಆಗಿದೆ. ಬಳಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ಆಂಬುಲೆನ್ಸ್ ಚಾಲಕ ಆಕಾಶ್, ಡಿ.ಎಂ ಪ್ರಮೋದ್, ಆರ್.ಎಂ ಯತೀಶ್, ಸಿಬ್ಬಂದಿ ರಾಜೇಶ್, ನಾಗರಾಜ್, ಉಮೇಶ್ ಹಾಗೂ ಕುಟುಂಬದ ಸದಸ್ಯರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.