ADVERTISEMENT

ಕನ್ನಡಾಂಬೆ ಕುರಿತ ಹೇಳಿಕೆ | ಬಾನು ಮುಷ್ತಾಕ್ ಸ್ಪಷ್ಟನೆ ನೀಡಲಿ: ಸಂಸದ ಯದುವೀರ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 10:11 IST
Last Updated 29 ಆಗಸ್ಟ್ 2025, 10:11 IST
   

ಮೈಸೂರು: 'ಬಾನು ಮುಷ್ತಾಕ್ ಕನ್ನಡಾಂಬೆ ಕುರಿತ ಹೇಳಿಕೆಗೆ ಮೊದಲು ಸ್ಪಷ್ಟನೆ ಕೊಡಲಿ. ಸ್ಪಷ್ಟೀಕರಣ ಕೊಡದಿದ್ದರೆ ಅವರು ದಸರಾ ಉದ್ಘಾಟಿಸುವುದಕ್ಕೆ ನನ್ನ ವಿರೋಧವಿದೆ' ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಉದ್ಘಾಟನೆಗೆ ಸರ್ಕಾರ ಅವರನ್ನು ಆಯ್ಕೆ ಮಾಡಿದಾಗ ಸ್ವಾಗತಿಸಿದ್ದೆ. ಅವರ ಹಳೆಯ ಭಾಷಣ ಈಚೆಗೆ ನೋಡಿದೆ. ಆ ಭಾಷಣಕ್ಕೆ ಸ್ಪಷ್ಟೀಕರಣ ಕೊಡಲಿ. ಇಲ್ಲವೇ ಹೇಳಿಕೆ ವಾಪಸ್ ಪಡೆಯಲಿ. ಎರಡೂ ಮಾಡದಿದ್ದರೆ ನನ್ನ ವಿರೋಧವಿದೆ. ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ. ಪಕ್ಷದ ವಿರುದ್ಧವಾದ ನಿಲುವು ನನ್ನದಲ್ಲ' ಎಂದು ಸ್ಪಷ್ಟಪಡಿಸಿದರು.

'ಭುವನೇಶ್ವರಿ ಕುರಿತ ಬಾನು ಮುಷ್ತಾಕ್ ಅವರ ಹೇಳಿಕೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರ ಧರ್ಮದ ಆಚರಣೆ ಬಗ್ಗೆ ನಾನು ಮಾತನಾಡಲಾರೆ. ನಮ್ಮ ಧರ್ಮದಲ್ಲಂತೂ ಮೂರ್ತಿ ಪೂಜೆ ಶ್ರೇಷ್ಠ. ‌ ಚಾಮುಂಡಿ ಮಾತೆಯನ್ನು ಗೌರವಿಸಿ ಬರಲಿ' ಎಂದರು.

ADVERTISEMENT

'ಚಾಮುಂಡಿಬೆಟ್ಟ ಸದಾ ಕಾಲದಿಂದಲೂ ಹಿಂದೂಗಳ ದೇವಸ್ಥಾನ. ಉಪಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದ. ಇದು ಬೇರೆಯವರ ಶ್ರದ್ಧಾಕೇಂದ್ರ ಆಗಲು ಹೇಗೆ ಸಾಧ್ಯ' ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.