ADVERTISEMENT

ಬಸವ ಎಕ್ಸ್‌ಪ್ರೆಸ್ ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:10 IST
Last Updated 8 ನವೆಂಬರ್ 2019, 10:10 IST
ಬಸವ ಎಕ್ಸ್‌ಪ್ರೆಸ್‌
ಬಸವ ಎಕ್ಸ್‌ಪ್ರೆಸ್‌   

ಮೈಸೂರು: ವಿಜಯಪುರ ಜಿಲ್ಲೆಯ ಮುಳವಾಡ-ಜುಮನಾಳ ರೈಲ್ವೆ ನಿಲ್ದಾಣಗಳ ನಡುವೆ ದ್ವಿಪಥ ಹಳಿ ಜೋಡಣೆ ಮಾರ್ಗದ ಕಾಮಗಾರಿ ನಡೆಯಲಿದ್ದು, ನ.10, 11ರಂದು ವಿಜಯಪುರ-ಬಾಗಲಕೋಟೆ ನಡುವೆ ಬಸವ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದಾಗಲಿದೆ.

ಮೈಸೂರು-ಬಾಗಲಕೋಟೆ ನಡುವೆ ಸಂಚರಿಸುವ ಬಸವ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 17307) ಈ ಎರಡು ದಿನ ಮೈಸೂರು-ವಿಜಯಪುರದವರೆಗೆ ಮಾತ್ರ ಸಂಚರಿಸಲಿದೆ.

ಇದೇ ರೀತಿ ಬಾಗಲಕೋಟೆ-ಮೈಸೂರು ನಡುವೆ ಸಂಚರಿಸುವ ರೈಲು (ರೈಲು ಸಂಖ್ಯೆ 17308) ವಿಜಯಪುರ-ಮೈಸೂರುವರೆಗೆ ಮಾತ್ರ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.