ಪರೀಕ್ಷೆ–ಪ್ರಾತಿನಿಧಿಕ ಚಿತ್ರ
ಮೈಸೂರು: ‘2025ರ ಜೂನ್‌ನಲ್ಲಿ ನಡೆದ ಬಿಎಡ್ 3ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಒಂದೇ ಪ್ರಶ್ನೆ ಪುನರಾವರ್ತನೆ ಆಗಿದೆ’ ಎಂದು ಆರೋಪಿಸಿ ವಿಜಯನಗರ ನಾಲ್ಕನೇ ಹಂತದ ನಿವಾಸಿ ಆರ್.ಎನ್.ಸತ್ಯನಾರಾಯಣ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವೆಗೆ ಪತ್ರ ಸಲ್ಲಿಸಿದ್ದಾರೆ.
‘ಪ್ರಶ್ನೆ ಪತ್ರಿಕೆಯ ಬಿ– ವಿಭಾಗದ 8ನೇ ಸಂಖ್ಯೆಯಲ್ಲಿನ ಪ್ರಶ್ನೆಯೇ, 11ನೇ ಕ್ರಮಸಂಖ್ಯೆಯಲ್ಲೂ ಪುನರಾವರ್ತನೆ ಆಗಿದೆ. ಲಕ್ಷಾಂತರ ಸಂಭಾವನೆ ಪಡೆಯುವ ಪ್ರಾಧ್ಯಾಪಕರು ಈ ರೀತಿ ಮೈಮರೆಯುವುದು ತಪ್ಪು, ತಕ್ಷಣವೇ ಪರೀಕ್ಷಾ ಪ್ರಾಧಿಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.