
ಮೈಸೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ, ಅನಂತೇಶ್ವರ ಟ್ರಸ್ಟ್ ಆಶ್ರಯದಲ್ಲಿ ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮಸಭಾದಲ್ಲಿ ಮಂಗಳವಾರ ‘ಮರೆಯಲಾಗದ ಮಹನೀಯರು’ ವಿಶೇಷ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಖ್ಯಾತ ಗಾಯಕ ನಿತಿನ್ ರಾಜಾರಾಮ್ ಶಾಸ್ತ್ರಿ ಸಾರಥ್ಯದಲ್ಲಿ, ಗಾಯಕರಾದ ದಿವ್ಯಾ ಸಚ್ಚಿದಾನಂದ, ಶ್ರೀದೇವಿ ಕುಳನೂರು, ಅಮೃತಾ ನಿತಿನ್ ಶಾಸ್ತ್ರಿ, ಋತ್ವಿಕ್ ಸಿ.ರಾಜ್, ಜಿ.ಆರ್.ಶ್ರೀಕರ ಸುಗಮ ಸಂಗೀತ ಸುಧೆ ಹರಿಸಿದರು. ಅಳುವ ಕಡಲೊಳು, ಕಾಣದ ಕಡಲಿಗೆ, ನಿತ್ಯೋತ್ಸವ ಸೇರಿದಂತೆ ಅನೇಕ ಹಾಡುಗಳನ್ನು ಪ್ರಸ್ತುತಪಡಿಸಿದರು.
ಪುರುಷೋತ್ತಮ್ (ಕೀಬೋರ್ಡ್), ಭೀಮಾಶಂಕರ್ ಬಿದನೂರು (ತಬಲಾ), ಬಾಲಸುಬ್ರಮಣ್ಯ (ಕೊಳಲು), ಎಚ್.ಪಿ. ಸುಜಯೇಂದ್ರ (ರಿದಂ ಪ್ಯಾಡ್) ವಾದ್ಯ ಸಹಕಾರ ನೀಡಿದರು. ನಿತಿನ್ ರಾಜಾರಾಂಶಾಸ್ತ್ರಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಚಲನಚಿತ್ರ ನಟ ಶಂಕರ್ ಅಶ್ವತ್ಥ್ ಮಾತನಾಡಿ, ‘ಭಾವಗೀತೆ ಎಂದರೆ ಸಾಹಿತ್ಯ ಮತ್ತು ಸಂಗೀತದ ಮಿಲನ’ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ‘ಮೈಸೂರು ಸ್ವರ್ಗಕ್ಕೆ ಸಮಾನ. ಸಭಿಕರು ದೇವತೆಗಳಿದ್ದಂತೆ. ಅಷ್ಟೊಂದು ಸಾಂಸ್ಕೃತಿಕ, ಸಹೃದಯ ಮನಸ್ಸುಗಳು ಇಲ್ಲಿವೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ನಾಗರಾಜ ವಿ.ಬೈರಿ ಮಾತನಾಡಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ.ರಘುರಾಂ, ಅನಂತೇಶ್ವರ ಟ್ರಸ್ಟ್‌ನ ಉಪಾಧ್ಯಕ್ಷ ಮಹಬಲೇಶ್ವರ ಬೈರಿ, ಎನ್.ಬೆಟ್ಟೇಗೌಡ, ರಂಗನಾಥ್ ಮೈಸೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.