ಬೆಟ್ಟದಪುರ: ಭುವನಹಳ್ಳಿ ಮೂರೂರಮ್ಮ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಚೆಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕ ಮತ್ತು ಬಾಲಕಿಯರ ಖೋ ಖೋ ಪ್ರಥಮ, ಬಾಲಕರ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ 3000 ಮೀ ಓಟ, ರಿಲೇ, ಉದ್ದಜಿಗಿತ, ಗುಂಡು ಎಸೆತ, ಬಾಲಕಿಯರ ವಿಭಾಗದಲ್ಲಿ 1500 ಮೀ ಓಟ, ಉದ್ದ ಜಿಗಿತ,ಜಾವಳಿನ್ ತ್ರಿವಿದ ಜಿಗಿತ, ವಿಭಾಗಗಳಲ್ಲಿ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿ ಸರೋಜಾ ಎಸ್‌ಡಿಎಂಸಿ ಅಧ್ಯಕ್ಷ ಶೇಖರ್, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ.ವಿ ಗಿರೀಶ್, ಹೇಮಾ ಪ್ರಭಾ, ಶಾಲಾ ಶಿಕ್ಷಣ ತಜ್ಞ ಬಿ.ಕೆ ನಾಗೇಂದ್ರ ಶಿಕ್ಷಕರಾದ ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ವಿಜಯಕುಮಾರ್, ಶಿವಶಂಕರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.