ಪಿರಿಯಾಪಟ್ಟಣ: ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ಸಾಮಾನ್ಯ ಕಾರ್ಯಕರ್ತನೂ ಸಹ ಪಕ್ಷದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಲು ಅವಕಾಶವಿರುವ ಏಕೈಕ ಪಕ್ಷ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಕುಂಬಾರಹಳ್ಳಿ ಸುಬ್ಬಣ್ಣ ಹೇಳಿದರು.
ಪಟ್ಟಣದ ಕನ್ನಂಬಾಡಿಯಮ್ಮ ಸಮುದಾಯ ಭವನದಲ್ಲಿ ನಡೆದ ತಾಲ್ಲೂಕು ಬಿಜೆಪಿ ಕಾರ್ಯಕರ್ತರ ಸಂಘಟನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶಕ್ತಿ ಕೇಂದ್ರಗಳು ಮತ್ತು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಹಕರಿಸಬೇಕಿದೆ’ ಎಂದರು.
ಬಿಜೆಪಿ ರಾಜ್ಯ ಪ್ರಕೋಷ್ಟ ಸಹ ಸಂಯೋಜಕ ಎನ್.ವಿ.ಪಣೀಶ್ ಮಾತನಾಡಿ, ‘ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಹರಸಾಹಸ ಪಡುತ್ತಿದ್ದು ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಲೇ ಇಲ್ಲ’ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿ.ರಾಜೇಂದ್ರ, ಜಿಲ್ಲಾ ಸಂಚಾಲಕ ಮೈ.ವಿ.ರವಿಶಂಕರ್, ಮಾಧ್ಯಮ ವಕ್ತಾರ ದಯಾನಂದ್, ಮಾಜಿ ಶಾಸಕ ಹೆಚ್.ಸಿ.ಬಸವರಾಜು ಮಾತನಾಡಿದರು.
ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಪಿ.ಎನ್.ಚನ್ನಬಸವರಾಜು, ಎಚ್.ಎಸ್.ರವಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ಕೌಲನಹಳ್ಳಿ ಸೋಮಶೇಖರ್, ಪ್ರಶಾಂತ್ ಗೌಡ, ಆರ್.ಟಿ.ಸತೀಶ್, ನಳಿನಿ, ಪಿ.ಜೆ.ರವಿ, ಟಿ.ರಮೇಶ್, ವಸಂತ್ ಕುಮಾರ್, ಕಿರಣ್ ಜಯರಾಮೇಗೌಡ, ಬಾಲಕೃಷ್ಣ, ಲೋಕೇಶ್, ರಾಮಚಂದ್ರ, ಪಾಪಣ್ಣ, ಬಾಲಚಂದ್ರ, ಸಾಮ್ರಾಟ್, ವಿಕ್ರಂ ರಾಜ್, ರಾಜೇಗೌಡ, ಲೋಕಪಾಲಯ್ಯ, ವಿಜಯ್ ಕುಮಾರ್, ಬೆಮ್ಮತ್ತಿ ಚಂದ್ರು, ಗಾಯಿತ್ರಿ, ಮೀನಾಕ್ಷಿ, ನಿರ್ಮಲ, ಗೀತಾ, ಶುಭ ಗೌಡ, ರಮ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.