
ಎಚ್.ಡಿ.ಕೋಟೆ: ‘ರಾಜ್ಯ ಸರ್ಕಾರವು ಅಂಗೀಕರಿಸಿರುವ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಿಂಬಕ) ವಿಧೇಯಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ಜಾರಿಗೊಳಿಸದಂತೆ ಬಿಜೆಪಿ ತಾಲ್ಲೂಕು ಘಟಕದಿಂದ ಮಂಗಳವಾರ ಪಟ್ಟಣದ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿ.ಕೆ. ಗಿರೀಶ್ ಮಾತನಾಡಿ, ‘ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ’ ಎಂದರು.
ತಹಶೀಲ್ದಾರ್ ಶ್ರೀನಿವಾಸ ಅವರಿಗೆ ಮನವಿ ಪತ್ರ ನೀಡಿ ಪ್ರತಿಭಟನೆ ಕೈಬಿಟ್ಟರು.
ಎಸ್‌ಐಗಳಾದ ಸುರೇಶ್ ನಾಯಕ್, ಶಿವಕುಮಾರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶಂಬೇಗೌಡ, ಕೆ.ಪಿ. ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಬಿಡಗಲು ರಾಜು, ಮುಖಂಡರಾದ ವೆಂಕಟಸ್ವಾಮಿ, ಶಿವಸ್ವಾಮಿ, ಚಂದ್ರಶೇಖರ್, ಚೆನ್ನಪ್ಪ, ಚಂದ್ರು, ಸುರೇಶ, ಶೇಖರ್, ಸುರೇಶ್, ಕೆ. ಲೋಕೇಶ್, ಪರಮೇಶ್, ಮಂಜುನಾಥ್, ಅಭಿನಂದನ್, ಚಂದ್ರಮೌಳಿ, ದಾಸ ನಾಯಕ, ಪೃಥ್ವಿ ಕುಮಾರ್, ರಾಜೇಶ್, ಕುಮಾರ, ರೂಪೇಶ್, ಕೆಂಡಗಣ್ಣ ಸ್ವಾಮಿ ಗುರುಸ್ವಾಮಿ, ರಾಮಚಂದ್ರ, ಮಲ್ಲಿಕಾರ್ಜುನ, ಚಂದ್ರೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.