ADVERTISEMENT

ಗ್ರಂಥ ಓದಿ ಗ್ರಹಿಸಿ; ರಂಗರಾಜು

ಪತ್ರಿಕಾ ಭವನದಲ್ಲಿ ‘ಸುತ್ತಮುತ್ತ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 14:21 IST
Last Updated 10 ಅಕ್ಟೋಬರ್ 2019, 14:21 IST
‘ಸುತ್ತಮುತ್ತ’ (ಆಯ್ದ ಲೇಖನಗಳು) ಕೃತಿ ಬಿಡುಗಡೆ ಸಮಾರಂಭದಲ್ಲಿ ರೂಪಾ ಪ್ರಕಾಶನದ ಮಹೇಶ್‌ ಯು.ಎಸ್, ಕವಯತ್ರಿ ಲತಾ ರಾಜಶೇಖರ್, ಪತ್ರಕರ್ತ ಸಿ.ಕೆ.ಮಹೇಂದ್ರ, ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು, ಚಿತ್ರ ನಿರ್ದೇಶಕ ಜಿ.ಆರ್.ಸತ್ಯಲಿಂಗರಾಜು, ಕೃತಿಯ ಲೇಖಕ ಜೆ.ಪುಟ್ಟಸ್ವಾಮಿ ಇದ್ದಾರೆ
‘ಸುತ್ತಮುತ್ತ’ (ಆಯ್ದ ಲೇಖನಗಳು) ಕೃತಿ ಬಿಡುಗಡೆ ಸಮಾರಂಭದಲ್ಲಿ ರೂಪಾ ಪ್ರಕಾಶನದ ಮಹೇಶ್‌ ಯು.ಎಸ್, ಕವಯತ್ರಿ ಲತಾ ರಾಜಶೇಖರ್, ಪತ್ರಕರ್ತ ಸಿ.ಕೆ.ಮಹೇಂದ್ರ, ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು, ಚಿತ್ರ ನಿರ್ದೇಶಕ ಜಿ.ಆರ್.ಸತ್ಯಲಿಂಗರಾಜು, ಕೃತಿಯ ಲೇಖಕ ಜೆ.ಪುಟ್ಟಸ್ವಾಮಿ ಇದ್ದಾರೆ   

ಮೈಸೂರು: ‘ಅಂತರ್ಜಾಲ ತಾಣಗಳು, ಫೇಸ್‌ಬುಕ್‌, ವೆಬ್‌ಸೈಟ್‌ಗಳನ್ನು ನಂಬದೆ ಮಾಹಿತಿಗಾಗಿ ಪುಸ್ತಕ ಓದಿ. ಗ್ರಂಥಗಳನ್ನು ಓದಿ ಗ್ರಹಿಸಿಕೊಳ್ಳಿ’ ಎಂದು ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ಗುರುವಾರ ಇಲ್ಲಿ ಸಲಹೆ ನೀಡಿದರು.

ಜೆ.ಪುಟ್ಟಸ್ವಾಮಿ ಅವರ ‘ಸುತ್ತಮುತ್ತ’ (ಆಯ್ದ ಲೇಖನಗಳು) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈಚೆಗಿನ ದಿನಗಳಲ್ಲಿ ಟಿ.ವಿ. ವೀಕ್ಷಣೆ ಹಾಗೂ ಅತಿಯಾದ ಇಂಟರ್‌ನೆಟ್‌ ಬಳಕೆಯಿಂದ ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕವಯತ್ರಿ ಲತಾ ರಾಜಶೇಖರ್ ಕೃತಿ ಬಿಡುಗಡೆಗೊಳಿಸಿ, ‘ಈ ಕೃತಿಯು ಪ್ರವಾಸಿ ಮಾರ್ಗದರ್ಶನದಂತಿದೆ. ಲೇಖಕರು ಕೃತಿಯಲ್ಲಿನ 55 ಲೇಖನಗಳಲ್ಲಿ ಸಾಮಾಜಿಕ, ಐತಿಹಾಸಿಕ ಹಿನ್ನೆಲೆಯನ್ನು ತಿಳಿಸಿದ್ದು, ಪ್ರತಿಯೊಂದು ಲೇಖನವು ವಿಶೇಷ ಶೀರ್ಷಿಕೆ ಹೊಂದಿದ್ದು, ಓದಿಸಿಕೊಂಡು ಹೋಗುವಂತಹ ಬರವಣಿಗೆಯಾಗಿದೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಚಿತ್ರ ನಿರ್ದೇಶಕ ಜಿ.ಆರ್.ಸತ್ಯಲಿಂಗರಾಜು, ರೂಪಾ ಪ್ರಕಾಶನದ ಮಹೇಶ್.ಯು.ಎಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.