
ಮೈಸೂರು: ಮಂಡ್ಯದ ಎಂಆರ್‌ಎಂ ಪ್ರಕಾಶನದ ಪ್ರಥಮ ವಾರ್ಷಿಕೋತ್ಸವ, ನಾದಾನಂದನಾಥ ಸ್ವಾಮೀಜಿ ವಿರಚಿತ ‘ಅವಧೂತ ಮಾದಪ್ಪ’ ಮತ್ತು ವೈದ್ಯಕೀಯ ವಿದ್ಯಾರ್ಥಿನಿ ಎಸ್.ಪಿ.ನಿಧಿ ಅವರ ‘ದಿ ಕಾಪಿ–ಎ ಫಾಟಲ್ ಪ್ಯಾಟರ್ನ್’ ಕೃತಿಗಳ ಬಿಡುಗಡೆ ಹಾಗೂ ‘ಎಂಆರ್‌ಎಂ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ಜ.12ರಂದು ಮಧ್ಯಾಹ್ನ 2ಕ್ಕೆ ತಿ.ನರಸೀಪುರ ತಾಲ್ಲೂಕು ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
‘ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಾಗೂ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಕೃತಿಗಳನ್ನು ಬಿಡುಗಡೆ ಮಾಡುವರು’ ಎಂದು ಶನಿವಾರ ಲೇಖಕ ದ.ಕೋ.ಹಳ್ಳಿ ಚಂದ್ರಶೇಖರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಹಕಾರಿ ಧುರೀಣ ವೈ.ಎನ್. ಶಂಕರೇಗೌಡ ಉದ್ಘಾಟಿಸುವರು. ಕಥೆಗಾರ ಅದೀಬ್ ಅಖ್ತರ್ ಅಭಿನಂದಿಸುವರು. ಎಂಆರ್‌ಎಂ ಪ್ರಕಾಶನದ ಮಂಜು ಮುತ್ತೇಗೆರೆ ಅಧ್ಯಕ್ಷತೆ ವಹಿಸುವರು. ಉಮೇಶ್ ದಡಮಹಳ್ಳಿ ಕೃತಿ ಕುರಿತು ಮಾತನಾಡುವರು’ ಎಂದರು.
‘ಎಂಆರ್‌ಎಂ ಸಾಹಿತ್ಯ ಪ‍್ರಶಸ್ತಿ’ಗೆ ಮಂಡ್ಯದ ಕವಿ ಕೆ.ಪಿ. ಮೃತ್ಯುಂಜಯ ಹಾಗೂ ‘ಎಂಆರ್‌ಎಂ ಪ್ರಕಾಶನ ಪ್ರಶಸ್ತಿ’ಗೆ ಮೈಸೂರಿನ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚನ್ನಾಜಮ್ಮ ಅವರನ್ನು ಅಭಿನಂದಿಸಲಾಗುವುದು. ಮುಖ್ಯ ಅತಿಥಿಗಳಾಗಿ ಲೇಖಕ ಲೋಕೇಶ್ ಬೆಕ್ಕಳಲೆ, ಕವಯಿತ್ರಿ ಎಚ್. ಆರ್.ಕನ್ನಿಕಾ, ಬನ್ನೂರಿನ ಆಕಾಶ್ ಸ್ಟೀಲ್ಸ್ ಅಂಡ್ ಸಿಮೆಂಟ್ ಮಾಲೀಕ ಜಿ.ಸುರೇಶ್, ಕವಿ ಕೊತ್ತತ್ತಿ ರಾಜು ಹಾಗೂ ನೇರಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ನೇರಲಕೆರೆ ಲೋಕೇಶ್ ಭಾಗವಹಿಸುವರು’ ಎಂದು ತಿಳಿಸಿದರು.
ಪ್ರಕಾಶಕ ಉಮೇಶ್ ದಡಮಹಳ್ಳಿ, ಪತ್ರಕರ್ತ ರುದ್ರಗೌಡ ಮುರಾಳ, ನಿಧಿ ಪೋಷಕರಾದ ಪ್ರವೀಣಕುಮಾರ್ ಹಾಗೂ ಪೂರ್ಣಿಮಾ ಹಾಜರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.