
ಮೈಸೂರು: ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ (ಜಿಲ್ಲಾ ಹಾಪ್‌ಕಾಮ್ಸ್) ನೂತನ ಅಧ್ಯಕ್ಷರಾಗಿ ಎಚ್.ಡಿ. ಕೋಟೆಯ ಬಿ.ಪಿ. ಬೋರೇಗೌಡ ಹಾಗೂ ಉಪಾಧ್ಯಕ್ಷರಾಗಿ ತಿ.ನರಸೀಪುರದ ವೈ.ಜಿ. ಮಹೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆ ಗುರುವಾರ ನಡೆಯಿತು.
ನಂತರ ಮಾತನಾಡಿದ ಬೋರೇಗೌಡ, ‘ಮಾಜಿ ಅಧ್ಯಕ್ಷ ಹೊಸಹುಂಡಿ ರಘು ನೇತೃತ್ವದಲ್ಲಿ ಚುನಾವಣೆ ನಡೆದು ನಮ್ಮ ತಂಡದ 12 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದೆವು. ಉಳಿದ ಇಬ್ಬರು ಸದಸ್ಯರೂ ನಮಗೆ ಬೆಂಬಲ ನೀಡಿದ್ದಾರೆ. ಎಲ್ಲಾ ನಿರ್ದೇಶಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ, ರೈತರು ಹಾಗೂ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.
ತೋಟದ ಬೆಳೆಗಾರರ ಸಹಕಾರ ಮಹಾಮಂಡಳದ ರಾಜ್ಯ ಉಪಾಧ್ಯಕ್ಷ ಸೂರ್ಯಕುಮಾರ್, ನಿರ್ದೇಶಕರಾದ ಹೊಸಹುಂಡಿ ರಘು, ಮಹಾದೇವ ಜೆ., ಬಿ.ಎನ್. ಪ್ರಭುಸ್ವಾಮಿ, ಎಸ್.ಕೆ. ಶಿವಣ್ಣ, ಸಂಜಯ್ ಎಂ.ವಿ., ಟಿ. ರಾಮೇಗೌಡ, ನಳಿನಿ ಎಸ್.ಜಿ., ಎಸ್. ನೇತ್ರಾವತಿ, ಡಿ. ಪದ್ಮನಾಭ, ಆರ್. ಸರ್ವೇಶ್, ಎಚ್.ಎಸ್. ಚಂದ್ರೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.