ADVERTISEMENT

ಲಂಚ: ಎಇಇ, ಎಇ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:45 IST
Last Updated 26 ಜನವರಿ 2023, 5:45 IST

ಮೈಸೂರು: ಹೊಸದಾಗಿ ನಿರ್ಮಿಸಿರುವ ಕಟ್ಟಡಕ್ಕೆ ಆರ್.ಆರ್. ನಂಬರ್ ನೀಡಲು ಲಂಚ ಪಡೆಯುತ್ತಿದ್ದ ಸೆಸ್ಕ್‌ ಎನ್‌.ಆರ್.ಮೊಹಲ್ಲಾ ಕಚೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜು ಮತ್ತು ಸಹಾಯಕ ಎಂಜಿನಿಯರ್ ಲೋಕೇಶ್ ಲೋಕಾಯುಕ್ತ ಬಲೆಗೆ ಬುಧವಾರ ಬಿದ್ದಿದ್ದಾರೆ.

ಎಲೆಕ್ಟ್ರಿಕಲ್‌ ಗುತ್ತಿಗೆದಾರ ಸೈಯದ್ ಮುಜಾಹಿದ್ದೀನ್ ಲೋಕಾಯುಕ್ತ ಪೊಲೀಸ್ ಠಾಣೆಗ ದೂರು ನೀಡಿದ್ದರು. ‘ಆರ್.ಆರ್. ನಂಬರ್ ಕೊಡುವುದಕ್ಕೆ ₹ 1.50 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಕೊನೆಗೆ, ₹ 70ಸಾವಿರಕ್ಕೆ ತೀರ್ಮಾನವಾಗಿತ್ತು. ಲಂಚದ ಹಣ ₹ 50ಸಾವಿರವನ್ನು ಪಡೆಯುವಾಗ ಬುಧವಾರ ಬಲೆಗೆ ಬಿದ್ದಿದ್ದಾರೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್‌ಕುಮಾರ್ ಠಾಕೂರ್, ಪೊಲೀಸ್ ಮಹಾನಿರೀಕ್ಷಕ ಸುಬ್ರಹ್ಮಣ್ಯೇಶ್ವರರಾವ್ ಮಾರ್ಗದರ್ಶನದಲ್ಲಿ ಪೊಲೀಸ್ ಅಧೀಕ್ಷಕ ಸುರೇಶ್‌ ಬಾಬು ಮತ್ತು ಡಿವೈಎಸ್ಪಿಗಳಾದ ಕೃಷ್ಣಯ್ಯ, ಮಾಲತೀಶ್ ನೇತೃತ್ವದಲ್ಲಿ ಮೈಸೂರು ಲೋಕಾಯುಕ್ತ ಠಾಣೆಯ ಇನ್‌ಸ್ಪೆಕ್ಟರ್‌ಗಳಾದ ಉಮೇಶ್, ಲೋಕೇಶ್, ರೂಪಶ್ರೀ ಮತ್ತು ಸಿಬ್ಬಂದಿ ಜಗದೀಶ್, ರಂಗಲಕ್ಷ್ಮಿ, ಲೋಕೇಶ್, ಪ್ರಕಾಶ್, ಕಾಂತರಾಜ್, ಪ್ರತೀಪ್, ಪುಷ್ಪಲತಾ, ಲೋಕೇಶ್, ಮೋಹನ್, ಪರಶುರಾಮ್‌ ಹಾಗೂ ಸುಂದರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.