ADVERTISEMENT

ಜೋಡೆತ್ತಿನಗಾಡಿ ಚಕ್ರ ಹರಿದು ವ್ಯಕ್ತಿಗೆ ಗಾಯ

ಎತ್ತಿನ ಗಾಡಿ ಓಟದ ಸ್ಪರ್ಧೆ, ಬೆದರಿದ ಜೋಡೆತ್ತು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 10:59 IST
Last Updated 25 ನವೆಂಬರ್ 2019, 10:59 IST
ಕಂಠೇನಹಳ್ಳಿಯಲ್ಲಿ ಭಾನುವಾರ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಯಿತು
ಕಂಠೇನಹಳ್ಳಿಯಲ್ಲಿ ಭಾನುವಾರ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಯಿತು   

ಕೆ.ಆರ್.ನಗರ: ಇಲ್ಲಿನ ಬಸವೇಶ್ವರ ರೈತರ ಗಾಡಿ ಸಂಘದ ವತಿಯಿಂದ ಕಂಠೇನಹಳ್ಳಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮುಂಭಾಗ ದೀಪಾವಳಿ ಮತ್ತು ಕಾರ್ತೀಕ ಸೋಮವಾರ ಪ್ರಯುಕ್ತ ಭಾನುವಾರ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಯಿತು.

ಕಾರ್ಗಲ್ ಗ್ರಾಮದ ಪ್ರದೀಪ್ ಪ್ರಥಮ (₹10 ಸಾವಿರ ನಗದು ಬಹುಮಾನ), ಬೆಳಗುಲಿ ಗ್ರಾಮದ ಜೈ ಆಂಜನೇಯ ಸಂಘ ದ್ವಿತೀಯ (₹8 ಸಾವಿರ), ಚಂದಗಾಲು ಗ್ರಾಮದ ಭೈರಾ ತೃತೀಯ (₹5 ಸಾವಿರ) ಮತ್ತು ಸಾಲಿಗ್ರಾಮ ಶಿವಕೃಪ ನಂದೀಶ್ ಸಮಾಧಾನಕರ (₹2 ಸಾವಿರ) ಬಹುಮಾನ ಪಡೆದರು.

ಸ್ಪರ್ಧೆಯಲ್ಲಿ ಕೆ.ಆರ್.ನಗರ. ಸಾಲಿಗ್ರಾಮ, ಮಿರ್ಲೆ, ಹೆಬ್ಬಾಳು, ಗಂಧನ ಹಳ್ಳಿ, ವಡ್ಡರಗುಡಿ, ರುದ್ರಪಟ್ಟಣ, ಹಳಿಯೂರು, ಮಲ್ಲಿನಾಥಪುರ, ಸಂಗರಶೆಟ್ಟಹಳ್ಳಿ, ಬೈಲಾಪುರ, ಗಳಿಗೆಕೆರೆ, ರಾಮನಾಥಪುರ, ಎಚ್.ಡಿ.ಕೋಟೆ, ಪಾಂಡವಪುರ, ಹುಣಸೂರು, ಹೊಳೆನರಸೀಪುರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಂದ ಒಟ್ಟು 27 ಜೋಡೆತ್ತುಗಳು ಭಾಗವಹಿಸಿದ್ದವು.

ADVERTISEMENT

ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ವೀಕ್ಷಿಸಲು ಯುವಕರು, ರೈತರು ಶಾಲಾ ಕಾಂಪೌಂಡ್, ಮರ ಮತ್ತು ಮನೆಗಳ ಮೇಲೆ ಹತ್ತಿದ್ದರು. ಸ್ಪರ್ಧೆಗೆ ಇಳಿದಿದ್ದ ಜೋಡೆತ್ತೊಂದು ಬೆದರಿ ಗಾಡಿ ಸಮೇತ ಜನಗಳ ಮಧ್ಯ ನುಗ್ಗಿತು. ಇದರಿಂದ ಸ್ಪರ್ಧೆ ವೀಕ್ಷಿಸಲು ಆಗಮಿಸಿದ್ದ ವ್ಯಕ್ತಿಯೊಬ್ಬರ ಮೇಲೆ ಗಾಡಿ ಚಕ್ರ ಹರಿದು ಪರಿಣಾಮ ಗಾಯಗೊಂಡರು. ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಪರ್ಧೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ರವಿಶಂಕರ್ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ಸುಬ್ರಹ್ಮಣ್ಯ, ಶಂಕರ್, ಸಂಘದ ಅಧ್ಯಕ್ಷ ಕೆ.ಎಸ್.ರಾಘವೇಂದ್ರ, ಉಪಾಧ್ಯಕ್ಷ ಗೋವಿಂದರಾಜು, ಕಾರ್ಯದರ್ಶಿ ಕೆ.ಪಿ.ಅಶ್ವಥ್ ನಾರಾಯಣ್, ಸದಸ್ಯರಾದ ಕೆ.ಎಸ್.ಗಜೇಂದ್ರ, ಅಶೋಕ್, ಜಗದೀಶ್, ದಿವಾಕರ್, ಪರಮೇಶ್, ದೇವರಾಜ್, ಅಶೋಕ್, ಮುಖಂಡ ನರಸಿಂಹರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.