ADVERTISEMENT

ಕುವೆಂಪು ನಗರದಲ್ಲಿ ಹೆಬ್ಬಾವಿನ ಸೆರೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 15:28 IST
Last Updated 13 ಸೆಪ್ಟೆಂಬರ್ 2020, 15:28 IST
ಹೆಬ್ಬಾವಿನ ಸೆರೆ
ಹೆಬ್ಬಾವಿನ ಸೆರೆ   

ಮೈಸೂರು: ನಗರದ ಜನನಿಬಿಡ ಪ್ರದೇಶವಾದ ಕುವೆಂಪು ನಗರದಲ್ಲಿ ಶನಿವಾರ ರಾತ್ರಿ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಸೆರೆ ಹಿಡಿಯಲಾಗಿದೆ.

ಕುವೆಂಪು ನಗರದ ಎಂ ಬ್ಲಾಕ್‌ ಸಮೀಪದಲ್ಲಿರುವ ಪಂಚಮಂತ್ರ ರಸ್ತೆ ಬದಿ ಅಂದಾಜು 7ರಿಂದ 8 ಅಡಿಗಳಷ್ಟು ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯರು ಸ್ನೇಕ್ ಶ್ಯಾಮ್‌ಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಮ್, ರಸ್ತೆ ಪಕ್ಕದ ಗಿಡಗಳ ಮಧ್ಯದಲ್ಲಿ ಅಡಗಿದ್ದ ಹೆಬ್ಬಾವನ್ನು ಸೆರೆ ಹಿಡಿದರು. ಈ ಕಾರ್ಯಾಚರಣೆಯಲ್ಲಿ ಶ್ಯಾಮ್‌ ಪುತ್ರ ಸೂರ್ಯ ಸಹ ಸಾಥ್ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.