ADVERTISEMENT

ಅತ್ಯಾಚಾರ ಯತ್ನ: ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 5:25 IST
Last Updated 15 ಅಕ್ಟೋಬರ್ 2022, 5:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಿರಿಯಾಪಟ್ಟಣ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ನೇರಳೆಕುಪ್ಪೆ ನವೀನ್ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

‘ಮಹಿಳೆಯ ದೂರದ ಸಂಬಂಧಿಯಾಗಿರುವ ಆರೋಪಿಯು, ಆಕೆಯ ಪತಿಗೆ ಅವರ ಮನೆಯಲ್ಲೇ ಮದ್ಯಪಾನ ಮಾಡಿಸಿ, ಆತ ಎಚ್ಚರ ತಪ್ಪಿದ ನಂತರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಯು ಸಂಬಂಧಿಯಾಗಿರುವುದರಿಂದ ಸಂಧಾನ ಮಾಡೋಣ ಎಂದು ಪತ್ನಿಯನ್ನು ಪತಿ ಸಮಾಧಾನಪಡಿಸಿದ್ದರು. ‘ಯಾವುದೇ ಕ್ರಮ ಆಗದಿದ್ದರಿಂದ ಶುಕ್ರವಾರ ತಡವಾಗಿ ದೂರು ನೀಡುತ್ತಿದ್ದೇವೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.