ADVERTISEMENT

ಜಾತಿ ಜನಗಣತಿ ವರದಿ ಬಿಡುಗಡೆಗೆ ಆಗ್ರಹಿಸಿ ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:06 IST
Last Updated 4 ಅಕ್ಟೋಬರ್ 2020, 3:06 IST
ಅಭಿಯಾನದಲ್ಲಿ ಪ್ರೊ.ಕೆ.ಎಸ್‌.ಭಗವಾನ್ ಅವರು ಸಹಿ ಹಾಕಿದರು. ಕೆ.ಎಸ್‌.ಶಿವರಾಮು, ಪುರುಷೋತ್ತಮ್, ಚಂದ್ರಶೇಖರ್ ಪಾಲ್ಗೊಂಡಿದ್ದರು
ಅಭಿಯಾನದಲ್ಲಿ ಪ್ರೊ.ಕೆ.ಎಸ್‌.ಭಗವಾನ್ ಅವರು ಸಹಿ ಹಾಕಿದರು. ಕೆ.ಎಸ್‌.ಶಿವರಾಮು, ಪುರುಷೋತ್ತಮ್, ಚಂದ್ರಶೇಖರ್ ಪಾಲ್ಗೊಂಡಿದ್ದರು   

ಮೈಸೂರು: ಜಾತಿ ಜನಗಣತಿ ವರದಿ ಯನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಶನಿವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಪುರಭವನ ಆವರಣದ ಅಂಬೇ ಡ್ಕರ್ ಪ್ರತಿಮೆ ಎದುರು ಸೇರಿದ ವೇದಿ ಕೆಯ ಸದಸ್ಯರು ಜಾತಿ ಜನಗಣತಿ ವರದಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ₹ 170 ಕೋಟಿ ವೆಚ್ಚದಲ್ಲಿ ಎಚ್.ಕಾಂತರಾಜ ಆಯೋಗವು ಜಾತಿವಾರು ಸಮಗ್ರ ಜನಗಣತಿ ನಡೆಸಿ ವರದಿ ಸಲ್ಲಿಸಿದೆ. ಆದರೆ, ಇನ್ನೂ ಬಿಡುಗಡೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಚಂದ್ರಶೇಖರ್, ಲೋಕೇಶ್ ಮಾದಪುರ, .ಕೆ.ರವಿ, ಪುಟ್ಟಸ್ವಾಮಿ, ಡಾ.ಸೋಮಶೇಖರ್ ಗೌಡ ಅನೇಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.