ADVERTISEMENT

ಜಾತಿವಾರು ಸಮೀಕ್ಷೆ | ನೀಗದ ತಾಂತ್ರಿಕ ತೊಂದರೆ: ಆಕ್ರೋಶ

ಪಾಲಿಕೆ ಕಚೇರಿಯಲ್ಲಿ ನೆರೆದ ನೂರಾರು ಸಮೀಕ್ಷಕರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 23:49 IST
Last Updated 27 ಸೆಪ್ಟೆಂಬರ್ 2025, 23:49 IST
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕಚೇರಿ ಹೊರಗೆ ಶನಿವಾರ ನೂರಾರು ಸಮೀಕ್ಷಕರು ನೆರೆದಿದ್ದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕಚೇರಿ ಹೊರಗೆ ಶನಿವಾರ ನೂರಾರು ಸಮೀಕ್ಷಕರು ನೆರೆದಿದ್ದರು.   

ಮೈಸೂರು: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಿದ್ಧಪಡಿಸಿರುವ ಆ್ಯಪ್‌ನಿಂದ ಸಮಸ್ಯೆ ಆಗಿದ್ದು ನಿವಾರಿಸಬೇಕು ಎಂದು ಒತ್ತಾಯಿಸಿ’ ಸಮೀಕ್ಷರು ಮಹಾನಗರ ಪಾಲಿಕೆಯಲ್ಲಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅಧಿಕಾರಿಗಳು ಸಭೆ ನಡೆಸುತ್ತಿದ್ದ ಕೊಠಡಿ ಹೊರಗೆ ಗದ್ದಲ ಏರ್ಪಟ್ಟಿತ್ತು.

ಅನುಕೂಲಕರ ಸ್ಥಳಕ್ಕೆ ನಿಯೋಜಿಸಬೇಕು, ಸಮರ್ಪಕವಾಗಿ ಆ್ಯಪ್ ಅಭಿವೃದ್ಧಿಪಡಿಸಬೇಕು ಎಂದು ಪಾಲಿಕೆ ಆಯುಕ್ತ ಶೇಕ್‌ ತನ್ವೀರ್‌ ಆಸಿಫ್‌ ಅವರಿಗೆ ಮನವಿ ಸಲ್ಲಿಸಲು ನೂರಾರು ಮಂದಿ ಬಂದಿದ್ದರು.

ಅದೇ ಸಮಯಕ್ಕೆ ಬಂದ ಅನಾರೋಗ್ಯಪೀಡಿತ ಸಮೀಕ್ಷಕರೊಬ್ಬರು ಮತ್ತು ಅವರ ಸಂಬಂಧಿಕರು, ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ನಡುವೆಯೇ ಎದ್ದು ಬಂದ ಅಧಿಕಾರಿಗಳು, ಸಮಸ್ಯೆ ಬಗೆಹರಿಸಲೆಂದೇ ಸಭೆ ನಡೆಸಲಾಗುತ್ತಿದೆ ಎಂಬ ಸಮಜಾಯಿಷಿಗೂ ಕಿವಿಗೊಡಲಿಲ್ಲ.

ADVERTISEMENT

‘ಸಮೀಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. 150ರಷ್ಟು ಸಮೀಕ್ಷಕರನ್ನು ಅವರು ಬಯಸಿದ ಸ್ಥಳಗಳಿಗೆ ನಿಯೋಜಿಸಿದ್ದೇವೆ‘ ಎಂದು ಉಪ ಆಯುಕ್ತ ಎಂ.ದಾಸೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.