ADVERTISEMENT

ವೇಶ್ಯಾವಾಟಿಕೆ ಮೇಲೆ ಸಿಸಿಬಿ ದಾಳಿ

ಪಶ್ಚಿಮ ಬಂಗಾಳದ ಇಬ್ಬರು ಯುವತಿಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:16 IST
Last Updated 7 ಆಗಸ್ಟ್ 2019, 19:16 IST

ಮೈಸೂರು: ನಗರ ಅಪರಾಧ ಪತ್ತೆ ವಿಭಾಗ (ಸಿಸಿಬಿ) ಪೊಲೀಸರು ಇಲ್ಲಿನ ರಾಜಕುಮಾರ ರಸ್ತೆಯ ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

ತುಮಕೂರಿನ ರವಿಕುಮಾರ್, ಕಾಸರಗೋಡಿನ ರೆಹಮಾನ್, ಮೇಟಗಳ್ಳಿಯ ಪ್ರಕಾಶ್ ಹಾಗೂ ರಾಜಕುಮಾರ ರಸ್ತೆಯ ದೀಪಕ್ ಬಂಧಿತರು.

ಡಿಸಿಪಿ ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಎ.ಮಲ್ಲೇಶ್, ನಜರ್‌ಬಾದ್ ಇನ್‌ಸ್ಪೆಕ್ಟರ್ ಎಂ.ಮಹದೇವಸ್ವಾಮಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ADVERTISEMENT

ರೈತ ಆತ್ಮಹತ್ಯೆ
ಬೆಟ್ಟದಪುರ:
ಇಲ್ಲಿಗೆ ಸಮೀಪದ ಮನುಗನಹಳ್ಳಿ ಗ್ರಾಮದ ರೈತ ಸ್ವಾಮಿ (30) ಕ್ರಿಮಿನಾಶಕ ಸೇವಿಸಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವಾಮಿ ತನ್ನ ತಾಯಿ ಮತ್ತು ಹೆಂಡತಿಯ ಹೆಸರಿನಲ್ಲಿ ಹಲವೆಡೆ ಕೈಸಾಲ ಮಾಡಿದ್ದರು ಎಂದು ಮೃತರ ತಂದೆ ಗೋವಿಂದೇಗೌಡ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಆತ್ಮಹತ್ಯೆ

ಮೈಸೂರು: ಇಲ್ಲಿನ ಗುಂಡೂರಾವ್‌ನಗರದ ನಿವಾಸಿ ಲಕ್ಷ್ಮೀ (23) ತಮ್ಮ ನಿವಾಸದಲ್ಲಿ ಎಲ್ಲರೂ ಮಲಗಿರುವಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಇವರ ವಿವಾಹವಾಗಿತ್ತು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ನಿಲ್ದಾಣದಲ್ಲಿ ವ್ಯಕ್ತಿ ಸಾವು

ಮೈಸೂರು: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತ ಕುಳಿತಿದ್ದ ಚಾಮರಾಜನಗರದ ನಾಗೇಶ್ (60) ಕುಳಿತ ಭಂಗಿಯಲ್ಲೇ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.