ADVERTISEMENT

ಮೈಸೂರು| ಸೆಸ್ಕ್‌ನಿಂದ ಕನ್ನಡ ಉತ್ಸವ: ಸಿಬ್ಬಂದಿಯ ಪ್ರತಿಭೆ ಪ್ರದರ್ಶನಕ್ಕೆ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 12:31 IST
Last Updated 29 ಜನವರಿ 2026, 12:31 IST
   

ಮೈಸೂರು: ಇಲ್ಲಿನ ವಿಜಯನಗರ 2ನೇ ಹಂತದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಪ್ರಧಾನ ಕಚೇರಿಯಲ್ಲಿ ‘ಕನ್ನಡ ಉತ್ಸವ-2025’ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪ್ರತಿಭೆ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಹಾಡುಗಾರಿಕೆ, ನೃತ್ಯ, ಕಿರುನಾಟಕ ಪ್ರಸ್ತುತಪಡಿಸಿದರು. ಆಹಾರ ಮೇಳದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಬೆಂಕಿರಹಿತವಾಗಿ ಹಲವು ಬಗೆಯ ತಿಂಡಿ– ತಿನಿಸುಗಳನ್ನು ಸಿದ್ಧಪಡಿಸಿ ಗಮನಸೆಳೆದರು. ರಂಗೋಲಿ ಸ್ಪರ್ಧೆ, ಕೇರಂ, ರಸಪ್ರಶ್ನೆ, ಮೊಬೈಲ್‌ ಫೋಟೊಗ್ರಫಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು, ‘ಕನ್ನಡ ಹಬ್ಬವನ್ನು ನವೆಂಬರ್‌ಗೆ ಮೀಸಲಾಗಿಸದೆ ನಿತ್ಯವೂ ಆಚರಿಸುತ್ತೇವೆ ಎಂಬುದನ್ನು ಈ ಮೂಲಕ ತೋರಿಸಲಾಗಿದೆ. ಕನ್ನಡ ನಮ್ಮ ಮಾತೃ ಭಾಷೆ ಎಂಬುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

‘ಸೆಸ್ಕ್‌’ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಮುಖ್ಯ ಪ್ರಧಾನ ವ್ಯವಸ್ಥಾಪಕಿ(ತಾಂತ್ರಿಕ) ಶರಣಮ್ಮ ಎಸ್‌. ಜಂಗಿನ, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಲೆಕ್ಕಪರಿಶೋಧಕಿ ನಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕರಾದ ಬಿ.ಆರ್.‌ ರೂಪಾ, ಎಲ್‌. ಲೋಕೇಶ್‌, ಎಚ್‌.ಆರ್.‌ ದಿನೇಶ್‌, ಟಿ. ರಾಮಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.