
ಸರಗೂರು: ‘ತಾಲ್ಲೂಕಿನ ಕುಂದೂರು ಚಿಕ್ಕದೇವಮ್ಮ ಜಾತ್ರಾ ಮಹೋತ್ಸವ ಜ.2 ಹಾಗೂ 3ರಂದು ತಾಲ್ಲೂಕಿನ ಕುಂದೂರು ಚಿಕ್ಕದೇವಮ್ಮನವರ ಜಾತ್ರೆ ನಡೆಯಲಿದ್ದು, ಪ್ರಾಣಿಬಲಿಯನ್ನು ನಿಷೇಧಿಸಿದ್ದು, ಯಾರೂ ಪ್ರಾಣಿ ಬಲಿ ಕೊಡಬಾರದು’ ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು.
ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಬೇಕು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರೆ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು, ಕಲ್ಲಂಬಾಳು ಪಿಡಿಒ ಇದರ ಜವಾಬ್ದಾರಿ ವಹಿಸಬೇಕು. ಶೌಚಾಲಯ ಮತ್ತು ಸ್ನಾನ ಮಾಡಿ ಬಟ್ಟೆ ಬದಲಾಯಿಸಿಕೊಳ್ಳಲು ಮಹಿಳೆಯರಿಗೆ ವ್ಯವಸ್ಥೆ ಕಲ್ಪಿಸಬೇಕು. ಜಾತ್ರೆಗೆ ಬರಲು ವಿವಿಧೆಡೆಯಿಂದ ಹೆಚ್ಚು ಸಾರಿಗೆ ವ್ಯವಸ್ಥೆ, ಅಂಗಡಿ ಹಾಗೂ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವಂತೆ’ ಧಾರ್ಮಿಕ ದತ್ತಿ ಇಲಾಖೆ ಇಒ ರಘು, ಪಾರುಪತ್ತೇದಾರ್ ಮಹದೇವಸ್ವಾಮಿ ಅವರಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಧಾರ್ಮಿಕ ದತ್ತಿ ಇಲಾಖೆ ಇಒ ರಘು, ಪಾರುಪತ್ತೇದಾರ್ ಮಹದೇವಸ್ವಾಮಿ, ಗ್ರಾಮದ ಯಜಮಾನರಾದ ಪುಟ್ಟಮಾದೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಚಿನ್ನಸ್ವಾಮಿ, ಮುಖಂಡ ಕುಂದೂರು ಮೂರ್ತಿ, ಶಂಭುಲಿಂಗನಾಯಕ, ನಿಂಗನಾಯಕ, ದೇವಣ್ಣ ಉಪ್ಪಿ, ಶಿವಕುಮಾರ್, ದಡದಹಳ್ಳಿ ಮೂರ್ತಿ, ಮಹೇಶ್, ಬೀರೇಗೌಡ, ಕಲ್ಲಂಬಾಳು ಶಿವಪ್ಪ, ನಾಗರಾಜಪ್ಪ, ಆರ್ ಐ ರವಿಚಂದ್ರ, ವಿಎ ಸತ್ಯನಾರಾಯಣ, ಬೆಟ್ಟದಕೃಷ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.
‘ಭಕ್ತರಿಗೆ ಅನ್ನದಾಸೋಹ ಸೌಲಭ್ಯ ಕಲ್ಪಿಸಬೇಕು’
ಎಂದು ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ತಿಳಿಸುತ್ತೇನೆ. ಇರುವ ದಿನಗಳಲ್ಲಿ ಆಗುವ ಕೆಲಸಗಳ ಬಗ್ಗೆ ಹಲವು ಮುಖಂಡರು ಜಾತ್ರೆ ನಡೆಸಲು ಆಗಬೇಕಾದ ಸೌಕರ್ಯದ ಬಗ್ಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.