ಮೈಸೂರು: ನಗರದ 1 ವರ್ಷ 8 ತಿಂಗಳ ಪುಟಾಣಿ ಎನ್.ಆರ್.ರಾಮರಕ್ಷ ಅದ್ಭುತ ಪ್ರತಿಭೆಯಾಗಿ ಹೊಮ್ಮಿದ್ದು, 215ಕ್ಕೂ ಅಧಿಕ ಚಟುವಟಿಕೆಗಳನ್ನು ಮಾಡುವ ಮೂಲಕ ವಿವಿಧ ದಾಖಲೆಗಳನ್ನು ನಿರ್ಮಿಸಿದ್ದಾಳೆ.
ಮಕ್ಕಳ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ, ವಿಶ್ವ ದಾಖಲೆ, ಸೂಪರ್ ಕಿಡ್ ಪ್ರಶಸ್ತಿ, ಕರ್ನಾಟಕ ಬುಕ್ ರೆಕಾರ್ಡ್, ಇಂಡಿಯನ್ ಬುಕ್ ರೆಕಾರ್ಡ್ ಪ್ರಶಸ್ತಿಗಳನ್ನು ಪಡೆದಿರುವ ರಾಮರಕ್ಷ, ವಿ.ರಮ್ಯಾ ಹಾಗೂ ಎನ್.ಆರ್.ರಾಹುಲ್ ಅವರ ಮಗಳು.
ಪುಟಾಣಿಯ ಚಟುವಟಿಕೆಗಳು:
‘100ಕ್ಕೂ ಅಧಿಕ ಫ್ಲಾಶ್ ಕಾರ್ಡ್‌ಗಳ ಗುರುತಿಸುವಿಕೆ, ದೇವರ ಹೆಸರು, ದಶಾವತಾರ, ಮಂತ್ರ, ಶ್ಲೋಕಗಳು, ದೇವರವಾಹನ, ವಾದ್ಯ, 25 ತರಕಾರಿಗಳು, 30 ಹಣ್ಣುಗಳು, 28 ಪ್ರಾಣಿಗಳು, ಕೀಟಗಳು, ಅಕ್ಷರಮಾಲೆಗಳು, ಕನ್ನಡ ಸ್ವರಗಳು, 10 ಎಲೆಕ್ಟ್ರಾನಿಕ್ ಸಾಧನಗಳು, 10 ರಾಷ್ಟ್ರೀಯ ಧ್ವಜಗಳು, 7 ಭಾರತೀಯ ಕರೆನ್ಸಿ, 8 ಭಾರತದ ಸ್ಮಾರಕಗಳು, 10 ವಿಜ್ಞಾನಿಗಳ ಹೆಸರು, ರಾಷ್ಟ್ರೀಯ ಚಿಹ್ನೆಗಳ ಹೆಸರು ಸೇರಿದಂತೆ ವಿವಿಧ ವಸ್ತು ವಿಷಯಗಳ ಬಗ್ಗೆಯೂ ತಿಳಿಸುತ್ತಾಳೆ’ ಎಂದು ತಾಯಿ ವಿ.ರಮ್ಯಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.