ADVERTISEMENT

ಮೈಸೂರು: ತೆರೆದ ಚರಂಡಿಯಲ್ಲಿ ಬಿದ್ದು ಪೌರಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 11:29 IST
Last Updated 7 ಜೂನ್ 2020, 11:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಬನ್ನೂರು ಹೋಬಳಿಯ ಮಾರಗೌಡನಹಳ್ಳಿಯಲ್ಲಿ ಹನುಮನಾಳು ಗ್ರಾಮ ಪಂಚಾಯಿತಿ ಪೌರಕಾರ್ಮಿಕ ಮುರುಗನ್ (40) ಶುಚಿಗೊಳಿಸುವ ವೇಳೆ ಆಯತಪ್ಪಿ ಚರಂಡಿಯೊಳಗೆ ಬಿದ್ದು ಮೃತಪಟ್ಟಿದ್ದಾರೆ.

ಶನಿವಾರ ಸುರಿದ ಭಾರಿ ಮಳೆಯಿಂದ ಗಿಡಗಂಟಿಗಳು ಬೆಳೆದಿದ್ದ ಚರಂಡಿಯಲ್ಲಿ ನೀರು ಮುಂದಕ್ಕೆ ಹೋಗದೇ ತುಂಬಿಕೊಂಡಿತ್ತು. ಚರಂಡಿಯೊಳಗೆ ಬೆಳೆದಿದ್ದ ಗಿಡಗಳನ್ನು ಇವರು ಕೀಳುತ್ತಿದ್ದರು. ಈ ವೇಳೆ ಆಯತಪ್ಪಿ ಚರಂಡಿಯೊಳಗೆ ಬಿದ್ದಿದ್ದಾರೆ. ತಲೆಯು ಚರಂಡಿಯ ಕಲುಷಿತ ನೀರಿನಲ್ಲಿ ಸಿಲುಕಿದೆ. ಜತೆಗೆ, ತಲೆಗೆ ಪೆಟ್ಟಾಗಿದೆ. ಇನ್ನಿತರ ಕಾರ್ಮಿಕರು ಬಂದು ಇವರನ್ನು ಮೇಲೆತ್ತುವಷ್ಟರಲ್ಲಿ ಇವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇವರ ಪತ್ನಿ ಪ್ರಿಯಾ ಅವರು ಬನ್ನೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಹನುಮನಾಳು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿರುದ್ಧ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.