ಪಿರಿಯಾಪಟ್ಟಣ: ಸಾರ್ವಜನಿಕರು ಕಸ ಸುರಿಯುತ್ತಿರುವ ಜಾಗದಲ್ಲಿ ರಂಗೋಲಿ ಬಿಡಿಸುವ ಮೂಲಕ ಅರಿವು ಮೂಡಿಸಲಾಯಿತು.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಜನರು ಕಸ ವಿಲೇವಾರಿ ವಾಹನಗಳಿಗೆ ಕಸ ಹಾಕದೆ ಕೆಲವು ಸ್ಥಳಗಳಲ್ಲಿ ಕಸ ಸುರಿಯುತ್ತಿರುವ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕಸ ಸುರಿಯುತ್ತಿದ್ದ ಸ್ಥಳವನ್ನು ಮಂಗಳವಾರ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಪ್ರಕಾಶ್ ಸಿಂಗ್, ಕಸ ವಿಂಗಡನೆ ಮತ್ತು ವಿಲೇವಾರಿಯಲ್ಲಿ ನಾಗರಿಕರ ಪಾತ್ರ ಬಹುಮುಖ್ಯ. ನಾಗರಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅರ್ಷದ್ ಮಾತನಾಡಿ, ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಇಂತಹ ಅನೇಕ ಜಾಗ ಗುರುತಿಸಿ, ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಇದರಿಂದ ಎಚ್ಚೆತ್ತುಕೊಂಡು ಕಸ ವಿಲೇವಾರಿ ವಾಹನಗಳಲ್ಲಿ ಕಸ ನೀಡಬೇಕು ಎಂದರು.
ವಾರ್ಡ್ ಸದಸ್ಯ ಮಂಜುನಾಥ, ಹೆಲ್ತ್ ಇನ್ ಸ್ಪೆಕ್ಟರ್ ಕೆ.ಜೆ.ಮೋಹನ್ ಮಾತನಾಡಿದರು.
ಪುರಸಭೆ ಸದಸ್ಯ ನಿರಂಜನ್, ಹೆಲ್ತ್ ಇನ್ ಸ್ಪೆಕ್ಟರ್ ಪ್ರದೀಪ್, ಪೌರ ಕಾರ್ಮಿಕ ಸಿಬ್ಬಂದಿಗಳಾದ ರಂಗರಾಜು, ಶ್ರೀನಿವಾಸ್, ಮಂಜುಳಾ, ಆನಂದ್, ಚಿಹ್ನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.