ADVERTISEMENT

ಎಚ್‌.ಸಿ. ಮಹದೇವಪ್ಪ ಮುಖ್ಯಮಂತ್ರಿಯಾಗಲಿ: ದಲಿತ, ಪ್ರಗತಿಪರ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:52 IST
Last Updated 15 ಅಕ್ಟೋಬರ್ 2025, 2:52 IST
ತಿ.ನರಸೀಪುರದಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡರು ಸಚಿವ ಎಚ್.ಸಿ.‌ಮಹದೇವಪ್ಪ ಅವರನ್ನು‌ ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿದರು
ತಿ.ನರಸೀಪುರದಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡರು ಸಚಿವ ಎಚ್.ಸಿ.‌ಮಹದೇವಪ್ಪ ಅವರನ್ನು‌ ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿದರು   

ತಿ.ನರಸೀಪುರ: ‘ಮುಖ್ಯಮಂತ್ರಿ ಬದಲಾವಣೆ ಆಗುವುದಾದರೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಅವಕಾಶ ನೀಡಿ’ ಎಂದು ದಲಿತ ಹಾಗೂ ಪ್ರಗತಿಪರ ಮುಖಂಡರು ಆಗ್ರಹಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ವಿವಿಧ ದಲಿತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ‘ರಾಜಕಾರಣದಲ್ಲಿ ನವೆಂಬರ್ ಕ್ರಾಂತಿಯಾಗಲಿದೆ ಎಂಬ ವಿಚಾರಗಳು ಚರ್ಚೆಯಲ್ಲಿದ್ದು, ಮುಖ್ಯಮಂತ್ರಿ ಬದಲಾವಣೆ ಆದಲ್ಲಿ ಆ ಸ್ಥಾನವನ್ನು, ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ ನಮ್ಮ ಕ್ಷೇತ್ರದ ಶಾಸಕ, ಸಚಿವ ಎಚ್‌.ಸಿ.ಮಹದೇವಪ್ಪ ಅವರನ್ನು‌ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ‌ ಮಾತನಾಡಿ, ‘ದೇಶದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ದಲಿತರ ಋಣ ಇದ್ದು, ಅದನ್ನು ತೀರಿಸುವ ಅವಕಾಶ ಕಾಂಗ್ರೆಸ್‌ಗೆ ಒದಗಿ ಬಂದಿದೆ. ಐದು ದಶಕಗಳಿಗೂ ಹೆಚ್ಚು ಕಾಲದಿಂದ ದಲಿತರು ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದಾರೆ’ ಎಂದರು.

ADVERTISEMENT

ಅಂಬೇಡ್ಕರ್ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಮೂಗೂರು ಸಿದ್ದರಾಜು, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ, ಕುಕ್ಕೂರು ಪ್ರಸನ್ನ, ನಿಲಸೋಗೆ ಬಸವರಾಜು, ಮೂಗೂರು ಎಂ.ಆರ್. ಸುಂದರ್, ಮಹಾದೇವಸ್ವಾಮಿ, ಆಲಗೂಡು. ಚಂದ್ರಶೇಖರ್, ಆಲಗೂಡು ಶಿವಣ್ಣ, ಕನ್ನಾಯಕನಹಳ್ಳಿ ಮರಿಸ್ವಾಮಿ, ಮಹದೇವಮ್ಮ, ಸೋಸಲೆ ರಾಜಶೇಖರ್, ಕೆಬ್ಬೆ ಹುಂಡಿ ನಿಂಗರಾಜು, ನಿಲಸೋಗೆ ಕುಮಾರ್, ತೊಟ್ಟವಾಡಿ ರಾಜಪ್ಪ, ಕೊಳತ್ತೂರು ಪ್ರಭಾಕರ್, ಚೌಹಳ್ಳಿ ಪರಶುರಾಮ್, ಹೆಮ್ಮಿಗೆ ಪ್ರಸನ್ನ, ಕುಪ್ಯಾ ಗವಿಸಿದ್ದಯ್ಯ, ಗೋವಿಂದರಾಜು, ನಾರಾಯಣಸ್ವಾಮಿ, ಸೋಸಲೆ ಶಿವು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.