ತಿ.ನರಸೀಪುರ: ಪಟ್ಟಣದ ತ್ರಿವೇಣಿ ನಗರದ ನಳಂದ ಬುದ್ಧವಿಹಾರದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತ ಆಲಗೂಡು ಎಸ್.ಚಂದ್ರಶೇಖರ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಮಾತನಾಡಿದ ಆಲಗೂಡು ಚಂದ್ರಶೇಖರ್, ಸಾಮಾಜಿಕ ಅಸಮಾನತೆ, ಬಾಬಾ ಸಾಹೇಬ ಅಂಬೇಡ್ಕರ್ ಆದರ್ಶ, ಚಿಂತನೆ ಅಳವಡಿಸಿಕೊಂಡು ದಲಿತ ಸಂಘರ್ಷ ಸಮಿತಿಯ ನೀತಿ ನಿಯಮಗಳ ವ್ಯಾಪ್ತಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಮ್ಮ ಹೋರಾಟದಿಂದ ಜನರಿಗೆ ನ್ಯಾಯ ಸಿಗುವುದಷ್ಟೆ ನಮ್ಮ ಗುರಿ ಎಂದರು.
ಪುರಸ್ಕೃತರಿಗೆ ಅಭಿನಂದಿಸಿದ ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ, ಚಂದ್ರಶೇಖರ್ ಸಾಮಾಜಿಕ ಕಳಕಳಿಯಿಂದ ಅನೇಕ ಹೋರಾಟ ಮಾಡಿಕೊಂಡು ನೊಂದವರಿಗೆ ನೆರವು ನೀಡಿದ್ದಾರೆ. ಪ್ರತಿಫಲಾಪೇಕ್ಷೆ ಇಲ್ಲದ ಸೇವೆಯಿಂದ ಅವರಿಗೆ ಅಂತರರಾಷ್ಟ್ರೀಯ ಭಾರತ್ ಜ್ಯೋತಿ ಪ್ರಶಸ್ತಿಯಿಂದ ಕರ್ನಾಟಕ ಭೂಷಣ ಪ್ರಶಸ್ತಿವರೆಗೂ ದೊರಕಿವೆ. ಇದು ಶೋಷಿತ ಸಮುದಾಯದ ಹೋರಾಟಕ್ಕೆ ದೊರೆತ ಗೌರವ ಎಂದರು.
ಒಕ್ಕೂಟದ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ಸಂಘಟನೆಯೊಂದಿಗೆ ಹೋರಾಟದ ಮೂಲಕ ನಾಗರಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಅವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಪ್ರಶಸ್ತಿಗಳು ಅರಸಿ ಬರುತ್ತದೆ ಎನ್ನುವುದಕ್ಕೆ ಚಂದ್ರಶೇಖರ್ ಜ್ವಲಂತ ಉದಾಹರಣೆ ಎಂದು ತಿಳಿಸಿದರು.
ಎಡದೂರೆ ಮಹದೇವಯ್ಯ, ಕೆಂಪಯ್ಯನ ಹುಂಡಿ ರಾಜು, ಒಕ್ಕೂಟದ ಸಂಚಾಲಕ ಸೋಮಣ್ಣ, ನಿಂಗರಾಜು, ಮಂಡ್ಯ ಮೀನಾಕ್ಷಿ , ಕನ್ನಾಯಕನಹಳ್ಳಿ ಮರಿಸ್ವಾಮಿ, ಗವಿಸಿದ್ದಯ್ಯ, ನರಗ್ಯತನಹಳ್ಳಿ ಮನೋಜ್, ಸೋಸಲೆ ಶಿವು, ಗೋವಿಂದರಾಜು, ಪ್ರಭಾಕರ್, ಪರಶುರಾಮ್, ರಾಜಪ್ಪ, ಬೈರಾಪುರ ಅರ್ಜುನ್, ಪ್ರಸನ್ನ, ಬನ್ನಹಳ್ಳಿ ಬಸವರಾಜು, ಜಯಣ್ಣ, ಐನೊರಹುಂಡಿ ರಾಜಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.