ADVERTISEMENT

ಬಾಲಕಿ ಒತ್ತೆ ಪ್ರಕರಣ: ಕಾನ್‌ಸ್ಟೆಬಲ್ ಅಮಾನತು

ವರುಣಾ ಮತ್ತು ನಂಜನಗೂಡಿನಲ್ಲಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 4:27 IST
Last Updated 20 ಜೂನ್ 2019, 4:27 IST

ಮೈಸೂರು: ಸಾಲ ವಾಪಸ್‌ ಕೊಡದ ಕಾರಣಕ್ಕೆ ಸಾಲ ಪಡೆದಿದ್ದ ವ್ಯಕ್ತಿಯ 15 ವರ್ಷದ ಪುತ್ರಿಯನ್ನು ಒತ್ತೆಯಾಗಿಟ್ಟುಕೊಂಡು, ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಪೊಲೀಸ್‌ ಕಾನ್‌ಸ್ಟೆಬಲ್ ಮಹೇಶ್ ಅವರನ್ನು ಅಮಾನತು ಮಾಡಲಾಗಿದೆ.

ಪ್ರಕರಣ ಕುರಿತು ಮೊದಲೇ ಮಾಹಿತಿ ಇದ್ದರೂ ಮೇಲಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ ಎಂಬ ಆರೋಪದ ಮೇರೆಗೆ ಸೋಮವಾರ ರಾತ್ರಿ ಇವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ಪದ್ಮಾ ಮತ್ತು ಪ್ರಸನ್ನಕುಮಾರ್ ಅವರನ್ನು ಬಂಧಿಸಲಾಗಿದೆ.

ಕಳ್ಳತನ

ADVERTISEMENT

ವರುಣಾ: ಇಲ್ಲಿಗೆ ಸಮೀಪದ ರಾಯನಹುಂಡಿಯ ಶಕ್ತಿ ವೈನ್ ಸ್ಟೋರ್‌ನಲ್ಲಿ ಮಂಗಳವಾರ ರಾತ್ರಿ ₹ 1.10 ಲಕ್ಷ ಮೌಲ್ಯದ ಮದ್ಯ ಕಳ್ಳತನವಾಗಿದೆ.

ಅಂಗಡಿಯ ಕಿಟಕಿ ಸರಳುಗಳನ್ನು ಮುರಿದು ಕಳ್ಳರು ಒಳನುಗ್ಗಿದ್ದಾರೆ. ಸಿ.ಸಿ.ಟಿವಿಗೆ ಅಳವಡಿಸಿದ್ದ ಡಿವಿಆರ್‌ನ್ನು ಸಹ ಕಳ್ಳರು ದೊಚಿದ್ದಾರೆ. ಬುಧವಾರ ಬೆಳಿಗ್ಗೆ ಶ್ವಾನದಳ ಹಾಗೂ ಬೆರಳಚ್ಚು ದಳ ಪರಿಶೀಲನೆ ನಡೆಸಿವೆ.

ಗ್ರಾಮಾಂತರ ಪ್ರೋಬೆಷನರಿ ಡಿವೈಎಸ್ಪಿ ಗಾನ ಪಿ.ಕುಮಾರ್, ವರುಣಾ ಪಿಎಸ್ಐ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿ ತನಿಖೆ ನಡೆಸಿದೆ. ಬಗ್ಗೆ ಮಾಲೀಕ ಶ್ರೀಕಾಂತ ದೂರು ಸಲ್ಲಿಸಿದ್ದು, ವರುಣಾ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.