ADVERTISEMENT

ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ಆಹಾರ ಸೇವಿಸಿ: ಕಳ್ಳಿಮುದ್ದನಹಳ್ಳಿ ಸತೀಶ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:49 IST
Last Updated 10 ಫೆಬ್ರುವರಿ 2026, 5:49 IST
ಸಾಲಿಗ್ರಾಮ ತಾಲ್ಲೂಕಿನ ಕರ್ಪೂರವಳ್ಳಿ ಸರ್ಕಾರಿ ಶಾಲೆಯಲ್ಲಿ ಸೋಮವಾರ ನಡೆದ ಮಕ್ಕಳ ಆಹಾರ ಮೇಳಕ್ಕೆ ಮುಖ್ಯಶಿಕ್ಷಕ ಕಳ್ಳಿಮುದ್ದನಹಳ್ಳಿ ಸತೀಶ್ ಚಾಲನೆ ನೀಡಿದರು. ಸಿಆರ್‌ಪಿ ಮಹೇಶ್, ಶಿಕ್ಷಕಿಯರಾದ ಸೀಮಾಬೇಗಂ, ವೇದಾವತಿ, ಜ್ಯೋತಿಲಕ್ಷ್ಮೀ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವ್ ಜೊತೆಗಿದ್ದರು
ಸಾಲಿಗ್ರಾಮ ತಾಲ್ಲೂಕಿನ ಕರ್ಪೂರವಳ್ಳಿ ಸರ್ಕಾರಿ ಶಾಲೆಯಲ್ಲಿ ಸೋಮವಾರ ನಡೆದ ಮಕ್ಕಳ ಆಹಾರ ಮೇಳಕ್ಕೆ ಮುಖ್ಯಶಿಕ್ಷಕ ಕಳ್ಳಿಮುದ್ದನಹಳ್ಳಿ ಸತೀಶ್ ಚಾಲನೆ ನೀಡಿದರು. ಸಿಆರ್‌ಪಿ ಮಹೇಶ್, ಶಿಕ್ಷಕಿಯರಾದ ಸೀಮಾಬೇಗಂ, ವೇದಾವತಿ, ಜ್ಯೋತಿಲಕ್ಷ್ಮೀ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವ್ ಜೊತೆಗಿದ್ದರು   

ಸಾಲಿಗ್ರಾಮ: ‘ಪ್ರತಿಯೊಬ್ಬ ಪೋಷಕರು ಮಕ್ಕಳ ಆರೋಗ್ಯ ಕಾಪಾಡಲು ಗುಣಮಟ್ಟದ ಆಹಾರ ನೀಡಬೇಕು’ ಎಂದು ಕರ್ಪೂರವಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಕಳ್ಳಿಮುದ್ದನಹಳ್ಳಿ ಸತೀಶ್ ಹೇಳಿದರು.

ಶಾಲೆ ಆವರಣದಲ್ಲಿ ಸೋಮವಾರ ಹಿರಿಯ ಶಿಕ್ಷಕಿ ಸೀಮಾಬೇಗಂ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದ ಮಕ್ಕಳ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಜಂಕ್ ಫುಡ್‌ನ್ನು ಸೇವನೆ ಮಾಡದೆ ಗುಣಮಟ್ಟದ ಆಹಾರವನ್ನು ನಿರಂತರವಾಗಿ ಸೇವನೆ ಮಾಡುವಂತೆ ಎಚ್ಚರಿಕೆ ವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.

ADVERTISEMENT

ಆಧುನಿಕತೆ ಹೆಚ್ಚಾದಂತೆ ಮಕ್ಕಳಿಗೆ ಯಾವ ಆಹಾರ ಸೇವನೆ ಮಾಡಬೇಕು ಎಂಬ ಮಾಹಿತಿ ಕೊರತೆಯಿಂದ ಅಮಾಯಕ ಮಕ್ಕಳು ಜಂಕ್ ಫುಡ್‌ನ್ನು ತಿನ್ನುವ ಮೂಲಕ ಹಲವು ರೋಗಗಳಿಗೆ ತುತ್ತಾಗಿ ನರಳುವ ಸ್ಥಿತಿ ಎದುರಾಗುತ್ತಿದೆ ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದು ಮಕ್ಕಳಿಗೆ ನಿರಂತರವಾಗಿ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಮುಂದಾಗಿದೆ ಎಂದರು.

ಮಕ್ಕಳು ತಿನ್ನುವ ಆಹಾರದ ಬಗ್ಗೆ ಪೋಷಕರು ನಿಗಾವಹಿಸದಿದ್ದರೆ ಮಕ್ಕಳು ಜೀವನ ಪರ್ಯಂತ ರೋಗಗಳಲ್ಲೇ ನರಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಶಾಲೆಯ ವಿದ್ಯಾರ್ಥಿಗಳು ಇಡ್ಲಿ, ಪೊಂಗಲ್, ಜೋಳದ ರೊಟ್ಟಿ, ಚಕ್ಕುಲಿ, ಕಜ್ಜಾಯ, ಹಣ್ಣುಗಳು ಸೇರಿದಂತೆ ದೇಸಿಯ ಪಾನಿಯ ಮಜ್ಜಿಗೆ ಮತ್ತು ನಿಂಬೆ ರಸ ಮಾರಾಟ ಮಾಡಿದರು. ಪೋಷಕರು ಮತ್ತು ವಿದ್ಯಾರ್ಥಿಗಳು ಜೋಳದರೊಟ್ಟಿ, ಇಡ್ಲಿ, ಚಕ್ಕುಲಿ, ಕಜ್ಚಾಯ ಸವಿದು ಸಂತಸಪಟ್ಟರು.

ತಂದ್ರೆಕ್ಲಸ್ಟರ್ ಸಿಆರ್‌ಪಿ ಮಹೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ್, ಹಿರಿಯ ಶಿಕ್ಷಕಿ ಸೀಮಾಬೇಗಂ, ವೇದಾವತಿ, ಜ್ಯೋತಿಲಕ್ಷ್ಮೀ, ಪರಮೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.