ಮೈಸೂರು: ಇಲ್ಲಿನ ರಿಂಗ್‌ರಸ್ತೆಯಲ್ಲಿರುವ ಜಿಎಲ್‌ಎನ್ ಕಲಾಮಂಟಪದಲ್ಲಿ ಸೋಮವಾರ ಬೋಗಾದಿಯ ಎನ್.ರಶ್ಮಿ ಹಾಗೂ ನವೀನ್ ಅವರ ವಿವಾಹದಲ್ಲಿ 108 ಮಂದಿ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು.
15 ಮಂದಿ ಪೌರಕಾರ್ಮಿಕರು, 3 ಅಂಗನವಾಡಿ ಕಾರ್ಯಕರ್ತೆಯರು, 6 ಮಂದಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಅಂಚೆ ಇಲಾಖೆಯ 7 ಮಂದಿ ಸಿಬ್ಬಂದಿ, 11 ಮಂದಿ ಶುಶ್ರೂಷಕರು, 26 ಮಂದಿ ವೈದ್ಯಕೀಯ ಸಿಬ್ಬಂದಿ, 32 ಮಂದಿ ಪೋಲಿಸರು, 4 ಮಂದಿ ಯೋಧರು ಹಾಗೂ 11 ಮಂದಿ ಮಾಧ್ಯಮದವರಿಗೆ ಭಗವಾನ್ ಬುದ್ಧನ ವಿಗ್ರಹ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಕೋಟೆ ಶಿವಣ್ಣ, ಎ.ಆರ್.ಕೃಷ್ಣಮೂರ್ತಿ, ಕೆ.ಮರೀಗೌಡ, ಪುರುಷೋತ್ತಮ್, ಟಿ.ಬಿ.ಚಿಕ್ಕಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.