ADVERTISEMENT

ಬಿಸಿಎಂ ಹಾಸ್ಟೆಲ್: ಸೀಟು ಹಂಚಿಕೆಗೆ ಕೌನ್ಸೆಲಿಂಗ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 14:28 IST
Last Updated 8 ಅಕ್ಟೋಬರ್ 2022, 14:28 IST
ಕುವೆಂಪುನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಕೌನ್ಸೆಲಿಂಗ್‌ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ್ ಮಾತನಾಡಿದರು
ಕುವೆಂಪುನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಕೌನ್ಸೆಲಿಂಗ್‌ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ್ ಮಾತನಾಡಿದರು   

ಮೈಸೂರು: ‘ಸರ್ಕಾರದ ಆದೇಶದಂತೆ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ್ ತಿಳಿಸಿದರು.

ಕುವೆಂಪುನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಕೌನ್ಸೆಲಿಂಗ್‌ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಪ್ರತಿ ವಿದ್ಯಾರ್ಥಿನಿಲಯಕ್ಕೂ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿತ್ತು ಮತ್ತು ವಿದ್ಯಾರ್ಥಿನಿಲಯವಾರು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈಗ ಇಡೀ ತಾಲ್ಲೂಕಿಗೆ ಅನ್ವಯಿಸುವಂತೆ ಒಂದೇ ಅರ್ಜಿಯಲ್ಲಿ ಗರಿಷ್ಠ ಅಂಕಗಳು ಹಾಗೂ ವರ್ಗಾವಾರು ಮೂಲಕ ವಿದ್ಯಾರ್ಥಿಗಳು ಅವರು ಬಯಸಿದ ವಿದ್ಯಾರ್ಥಿನಿಲಯಕ್ಕೆ ಆಯ್ಕೆ ಮಾಡಿಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

‘ಬಾಲಕರ ಹಾಸ್ಟೆಲ್‌ನಲ್ಲಿ 461 ಸೀಟುಗಳು ಖಾಲಿ ಇದ್ದು, 1,027 ಅರ್ಜಿಗಳು ಬಂದಿವೆ. ಬಾಲಕಿಯರ ಹಾಸ್ಟೆಲ್‌ನಲ್ಲಿ 408 ಸೀಟುಗಳು ಖಾಲಿ ಇದ್ದು, 1,097 ಅರ್ಜಿಗಳು ಬಂದಿವೆ. ಇದರಲ್ಲಿ ಅಂಗವಿಕಲರಿಗೆ, ದೃಷ್ಟಿದೋಷವುಳ್ಳವರಿಗೆ ಹಾಗೂ ಕೋವಿಡ್‌ನಲ್ಲಿ ಮೃತಪಟ್ಟವರ ಮಕ್ಕಳಿಗೂ ಆದ್ಯತೆ ನೀಡಲಾಗುವುದು’ ಎಂದರು.

‘ಸರ್ಕಾರವು ಪ್ರತಿ ವಿದ್ಯಾರ್ಥಿನಿಲಯಕ್ಕೆ ಶೇ.25ರಷ್ಟು ಹೆಚ್ಚುವರಿ ಸೀಟು ನೀಡಿದ್ದರೂ ಅರ್ಜಿ ಸಲ್ಲಿಸಿದವರಿಗೆಲ್ಲಾ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

ತಾಲ್ಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ, ವಿಸ್ತರಣಾಧಿಕಾರಿ ಸತೀಶ್, ನಿಲಯಪಾಲಕರಾದ ಜಗದೀಶ್ ಕೋರಿ, ಪರಶುರಾಂ, ವೀರಬಸಪ್ಪ, ಮಂಜುನಾಥ್, ಯಶವಂತ್, ಹೇಮಾವತಿ, ರಮ್ಯಾ, ಮೀನಾ, ಮಂಜುನಾಥ್, ನಟರಾಜ್, ಅನುಪಮಾ, ರೇಖಾ, ಭಾಗ್ಯಲಕ್ಷಿ, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.