ADVERTISEMENT

ಬೆಳೆಯನ್ನು ಕುರಿಗೆ ಆಹಾರವಾಗಿ ನೀಡಿದ ರೈತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 9:51 IST
Last Updated 5 ಏಪ್ರಿಲ್ 2020, 9:51 IST

ಮೈಸೂರು: ಬೆಳೆದಿದ್ದ ಮುಕ್ಕಾಲು ಎಕರೆ ಕೋಸಿನ ಬೆಳೆಗೆ ಯೋಗ್ಯ ಬೆಲೆ ಸಿಗದಿರುವುದನ್ನು ಮನಗಂಡ ಹುಣಸೂರು ತಾಲ್ಲೂಕಿನ ಶಂಕರೇಗೌಡನಕೊಪ್ಪಲಿನ ರೈತ ದೊರೆಸ್ವಾಮಿ ಅವರು ಬೇಸರಗೊಂಡು ಕಟಾವು ಮಾಡದೇ ಬೆಳೆದಿದ್ದ ಬೆಳೆಯನ್ನು ಕುರಿಗಳಿಗೆ ಆಹಾರವಾಗಿ ನೀಡಿದ್ದಾರೆ.

ಕುರಿಗಳನ್ನು ಜಮೀನಿಗೆ ಬಿಟ್ಟು ಮೇಯಿಸುವ ಮೂಲಕ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದೊರೆಸ್ವಾಮಿ, ‘ಎಪಿಎಂಸಿಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಕಟಾವು ಮಾಡಿ, ಸರಕುಸಾಗಣೆ ವಾಹನದಲ್ಲಿ ಸಾಗಿಸುವ ವೆಚ್ಚವೂ ಸಿಗುತ್ತಿಲ್ಲ. ಹೀಗಾಗಿ, ಬೆಳೆಗೆ ಕುರಿಗಳನ್ನು ಬಿಟ್ಟು ಮೇಯಿಸಿದ್ದೇನೆ. ಇನ್ನು ಒಂದೂವರೆ ಎಕರೆ ಪ್ರದೇಶದಲ್ಲಿ ಟೊಮೆಟೊ ಇದೆ. ಏನಾಗುವುದೋ ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.