
ಮೈಸೂರು: ಜಾಶ್ಮಿಶ್ ಯಶವಂತ್ ಪವಾರ್ ಹಾಗೂ ಎಮಯಾ ಪ್ರಕಾಶ್ ಅವರು ಭಾನುವಾರ ನಗರದಲ್ಲಿ ನಡೆದ ಮಕ್ಕಳ ಸೈಕ್ಲಥಾನ್‌ನ 12 ವರ್ಷದ ಒಳಗಿನವರ ಸ್ಪರ್ಧೆಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಬಾಲಕರ ವಿಭಾಗದಲ್ಲಿ ಜಿ. ಮೋಹಿತ್ ಪ್ರಸಾದ್ ದ್ವಿತೀಯ ಹಾಗೂ ಗ್ಯಾನ್ ಗಣಪತಿ ತೃತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಆರ್ಚಾ ಸಿವೀಜ್ ಹಾಗೂ ಎಂ. ಚಾರ್ವಿ ತೃತೀಯ ಸ್ಥಾನ ಪಡೆದರು.
ಸಂಸದರ ಕ್ರೀಡಾ ಮಹೋತ್ಸವ ಅಂಗವಾಗಿ ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ನಗರದ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಆವರಣದಲ್ಲಿ ಆಯೋಜಿಸಿದ್ದ ಸ್ಪರ್ಧೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
‘ಮಕ್ಕಳು ದೈಹಿಕ ಕ್ಷಮತೆ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಕ್ರೀಡಾ ಮನೋಭಾವವನ್ನು ವೃದ್ಧಿಸುತ್ತದೆ’ ಎಂದು ಹೇಳಿದರು.
ಮೈಸೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಸಿ. ವೆಂಕಟೇಶ್, ಡಾ. ಸುಶ್ರುತ್ ಗೌಡ, ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಕಾರ್ಯದರ್ಶಿ ಲೋಕೇಶ್ ನರಸಿಂಹಾಚಾರ್ ಹಾಗೂ ಪದಾಧಿಕಾರಿಗಳು ಇದ್ದರು.
6, 8, 10 ಮತ್ತು 12 ವರ್ಷದೊಳಗಿನ ನಾಲ್ಕು ವಯೋವರ್ಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ಹೆಲ್ಮೆಟ್ ಧರಿಸಿದ ಚಿಣ್ಣರು ಉತ್ಸಾಹದಿಂದ ಬಣ್ಣ ಬಣ್ಣದ ಸೈಕಲ್ ಗಳನ್ನು ತುಳಿಯುವುದನ್ನು ಕಂಡು ಪುಳಕಗೊಂಡ ಪೋಷಕರು ಮಾರ್ಗದ ಬದಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಫಲಿತಾಂಶ: ಬಾಲಕರು: 6 ವರ್ಷದ ಒಳಗಿನವರು: ಸ್ಕಂದ ಕೌಶಿಕ್–1, ಆರ್ಯನ್ ಸೂರ್ಯ–2, ಸೈಯದ್ ಜುಹೆರುದ್ದಿನ್ ಖಿಲ್ಜಿ–3; 8 ವರ್ಷದ ಒಳಗಿನವರು: ಮೊಹಮ್ಮದ್ ಮೆಹರನ್–1, ಡಿ.ಎಂ. ವೃಶಾಂಕ್–2, ಸೈಯದ್ ಜೈದುದ್ದಿನ್ ಖಿಲ್ಜಿ–3; 10 ವರ್ಷದ ಒಳಗಿನವರು: ರಿಷಬ್ ಖಂಡಾಗಲೆ–1, ವಿಹಾನ್ ಮಂದಣ್ಣ–2, ಸ್ಯಾವಿಯೋ ಪಾಲ್–3.
ಬಾಲಕಿಯರು: 6 ವರ್ಷದ ಒಳಗಿನವರು: ಲಹರಿ ಪೂವಯ್ಯ–1, ಖುಷಿ ಚೇತನ್–2, ಆನ್ಯ ಲೋಕೇಶ್–3; 8 ವರ್ಷದ ಒಳಗಿನವರು: 1. ಚಾವಿ ರಾವ್–1, ವೆಂಬ ಪ್ರಕಾಶ್–2, ದಿಯಾ ಸೋಲಂಕಿ–3; 10 ವರ್ಷದ ಒಳಗಿನವರು: ತಾಶಿ ಕೆ.ಡಿ.–1, ನೈಜ ಸಿರಿ ಎಚ್.ಎನ್–2, ಪೆಹಲ್ ಜೈನ್–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.