ADVERTISEMENT

ಮೈಸೂರು| ಜಿಟಿಡಿ ದಲಿತ ವಿರೋಧಿ ಹೇಳಿಕೆ ಖಂಡನೀಯ: ಭೀಮ್ ಸೇನೆ ಮುಖಂಡರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:41 IST
Last Updated 21 ಆಗಸ್ಟ್ 2025, 4:41 IST
ಜಿಟಿಡಿ
ಜಿಟಿಡಿ   

ಮೈಸೂರು: ‘ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ಅವಕಾಶ ನೀಡಿದರೆ ಸಹಕಾರ ಸಂಘಗಳ ಬಾಗಿಲು ಮುಚ್ಚಬೇಕಾಗುತ್ತದೆ ಎಂಬ ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆ ಖಂಡಿಸಿ’ ಕರ್ನಾಟಕ ಭೀಮ್ ಸೇನೆ ಮುಖಂಡರು ಗಾಂಧಿನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿದರು.

‘ಅಧಿವೇಶನದಲ್ಲಿ ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮತ್ತು ರೋಸ್ಟರ್ ಪದ್ಧತಿಯಲ್ಲಿ ಅಧಿಕಾರ ಹಂಚಿಕೆ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ್ದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿ, ದಲಿತರನ್ನು ಅವಮಾನಿಸಿದ್ದಾರೆ. ಇವರ ಈ ದುರಹಂಕಾರದ ನಡವಳಿಕೆಯನ್ನು ಇಡೀ ದಲಿತ ಸಮೂಹ ಖಂಡಿಸುತ್ತದೆ’ ಎಂದು ಕಿಡಿ ಕಾರಿದರು.

‘ಹೇಳಿಕೆಯು ಅವರ ನಡವಳಿಕೆ ಪುಷ್ಟೀಕರಿಸುತ್ತಿದೆ. ಜಿ.ಟಿ.ದೇವೇಗೌಡ ಮತ್ತು ಅವರ ಅಳಿಯ ನಡೆಸಿರುವ ಭೂ ಹಗರಣಗಳ ಬಗ್ಗೆ ಈಗಾಗಲೇ ಜನರಿಗೆ ಗೊತ್ತಿದೆ. ಇಂತಹ ಕ್ರಿಮಿನಲ್ ಪ್ರಕರಣ ಹೊಂದಿರುವವರು ದಲಿತರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ ಇವರ ಸದಸ್ಯತ್ವವನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಮಂಜುನಾಥ್, ಮುಖಂಡರಾದ ನಾಗಣ್ಣ, ಶರತ್, ಮೋಹನ್, ಜ್ಯೋತಿ, ವಿಜಯ್, ಕಿರಣ್, ಭೀಮಣ್ಣ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.