ADVERTISEMENT

ಅರಮನೆ ಅಂಗಳದಲ್ಲಿ ಅ.7ರಿಂದ ದಸರಾ ಸಾಂಸ್ಕೃತಿಕ ವೈಭವ: ಇಲ್ಲಿದೆ ಕಾರ್ಯಕ್ರಮ ಪಟ್ಟಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 10:34 IST
Last Updated 1 ಅಕ್ಟೋಬರ್ 2021, 10:34 IST
ಮೈಸೂರಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆ ಮಾಡಿದರು
ಮೈಸೂರಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆ ಮಾಡಿದರು   

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಇಲ್ಲಿನ ಅರಮನೆ ಅಂಗಳದಲ್ಲಿ ಅ.7ರಿಂದ 13ರವರೆಗೆ ನಿತ್ಯ ಸಂಜೆ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಹೆಸರಾಂತ ಕಲಾವಿದರು ಸಂಜೆ 6ರಿಂದ 9.30ರವರೆಗೆ ಅರಮನೆ ದೀಪಾಲಂಕಾರದ ಬೆಡಗಿನ ನಡುವೆ ಕಾರ್ಯಕ್ರಮ ನೀಡಲಿದ್ದಾರೆ.

ಕಾರ್ಯಕ್ರಮ ಪಟ್ಟಿ ಇಂತಿದೆ (ಅ.7ರಿಂದ 13ರವರೆಗೆ ನಿತ್ಯ ಸಂಜೆ 6ರಿಂದ 9.30)

ಅ.7: ಮುಖ್ಯಮಂತ್ರಿಯಿಂದ ಉದ್ಘಾಟನೆ, ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ, ಬೆಂಗಳೂರಿನ ಪ್ರಭಾತ್‌ ಕಲಾವಿದರಿಂದ ಕರ್ನಾಟಕ ವೈಭವ ನೃತ್ಯ ರೂ‍ಪಕ

ADVERTISEMENT

ಅ.8: ಮಳವಳ್ಳಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು (ಜನಪದ ಕಾವ್ಯ ಗಾಯನ), ಶಿವಮೊಗ್ಗದ ಹೊಸಹಳ್ಳಿ ವೆಂಕಟರಾಮು ಮತ್ತು ತಂಡ (ವಯಲಿನ್‌), ವೈ.ಕೆ.ಮುದ್ದುಕೃಷ್ಣ ಮತ್ತು ತಂಡ (ಕನ್ನಡ ಡಿಂಡಿಮ)

ಅ.9: ಮೈಸೂರಿನ ಎಚ್‌.ಎನ್‌.ಭಾಸ್ಕರ್‌ ಮತ್ತು ತಂಡ (ಸಂಗೀತ ದರ್ಬಾರ್‌), ಹಂಸಲೇಖ ಮತ್ತು ತಂಡ (ದೇಸಿ ಸಂಸ್ಕೃತಿ ಹಬ್ಬ)

ಅ.10: ಬೆಂಗಳೂರಿನ ಅಮೋಘ ವರ್ಷ ಡ್ರಮ್ಸ್‌ (ಮಿಶ್ರ ವಾದ್ಯಗಾಯನ), ಮೈಸೂರಿನ ಶಾಂತಲ ವಟ್ಟಂ ಮತ್ತು ತಂಡ (ಗಜಲ್‌), ಶಮಿತಾ ಮಲ್ನಾಡ್‌ ಮತ್ತು ತಂಡ (ಮಧುರ ಮಧುರವೀ ಮಂಜುಳಗಾನ)

ಅ.11: ಪೊಲೀಸ್ ಬ್ಯಾಂಡ್‌, ಬಾಗಲಕೋಟೆಯ ಶ್ರೇಯಾ ಪ್ರಹ್ಲಾದ್‌ ಕುಲಕರ್ಣಿ (ನೃತ್ಯರೂಪಕ), ರಾಯಚೂರು ಶೇಷಗಿರಿದಾಸ್‌ ಮತ್ತು ತಂಡ (ದಾಸವಾಣಿ)

ಅ.12: ಅದಿತಿ ಪ್ರಹ್ಲಾದ್‌ (ಸುಗಮ ಸಂಗೀತ), ಮುದ್ದುಮೋಹನ್‌ ತಂಡ (ಹಿಂದೂಸ್ತಾನಿ ಸಂಗೀತ), ಪ್ರವೀಣ್‌ ಗೋಡ್ಖಿಂಡಿ, ಷಡಜ್‌ ಗೋಡ್ಖಿಂಡಿ (ಕೊಳಲು ವಾದನ ಜುಗಲ್‌ ಬಂದಿ)

ಅ.13: ಜಯತೀರ್ಥ ಮೇವುಂಡಿ (ಹಿಂದೂಸ್ತಾನಿ ಗಾಯನ), ಬಿ.ಜಯಶ್ರೀ ಮತ್ತು ತಂಡ (ರಂಗಗೀತೆ), ಶ್ರೀಧರ್‌ ಜೈನ್‌ ಮತ್ತು ತಂಡ (ನೃತ್ಯರೂಪಕ)

ಪೋಸ್ಟರ್‌ ಬಿಡುಗಡೆ:ಮೈಸೂರಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆ ಮಾಡಿದರು. ಶಾಸಕ ಬಿ.ಹರ್ಷವರ್ಧನ್‌, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಸಂಸದ ಪ್ರತಾಪಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಇದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.