ADVERTISEMENT

ಮೈಸೂರಿಗೆ ದಸರಾ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 5:39 IST
Last Updated 10 ಅಕ್ಟೋಬರ್ 2024, 5:39 IST
<div class="paragraphs"><p>ಮೈಸೂರು ದಸರಾ</p></div>

ಮೈಸೂರು ದಸರಾ

   

ಮೈಸೂರು: ನಾಡಹಬ್ಬ ದಸರಾ ಸಂಭ್ರಮವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದು, ದಟ್ಟಣೆ ತಪ್ಪಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗವು ವಿಶೇಷ ರೈಲು ಸೇವೆ ಆರಂಭಿಸಿದೆ.

ಅರಸೀಕೆರೆ– ಮೈಸೂರು ರೈಲು ಅ.10ರಿಂದ ಅ.12ರ ವರೆಗೆ ಮೂರು ಟ್ರಿಪ್‌ ಓಡಾಡಲಿದೆ. ಮಧ್ಯಾಹ್ನ 2 ಗಂಟೆಗೆ ಅರಸೀಕೆರೆಯಿಂದ ಹೊರಟು ಸಂಜೆ 6.40ಕ್ಕೆ ಮೈಸೂರು ತಲುಪಲಿದೆ. ಸಂಜೆ 6.50ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 11.45ಕ್ಕೆ ತಲುಪಲಿದೆ.

ADVERTISEMENT

ಬೆಳಗಾವಿ– ಮೈಸೂರು ರೈಲು ಬೆಳಗಾವಿಯನ್ನು ಸಂಜೆ 5.30ಕ್ಕೆ ಬಿಡಲಿದ್ದು, ಮಾರನೆಯ ಬೆಳಿಗ್ಗೆ 6.25ಕ್ಕೆ ಮೈಸೂರು ತಲುಪುತ್ತದೆ. ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಡುವ ರೈಲು ಮಾರನೆಯ ಬೆಳಿಗ್ಗೆ 7ಕ್ಕೆ ಬೆಳಗಾವಿ ಸೇರಲಿದೆ.

ಮೈಸೂರು– ಚಾಮರಾಜನಗರಕ್ಕೆ ಐದು ಟ್ರಿಪ್‌ ಸೇವೆಯನ್ನು ಅ.9ರಿಂದ ಅ.13ರವರೆಗೆ ಆರಂಭಿಸಲಾಗಿದ್ದು, ಮೈಸೂರಿನಿಂದ ರಾತ್ರಿ 11.30ಕ್ಕೆ ಹೊರಟು ಮುಂಜಾನೆ 1.30ಕ್ಕೆ ತಲುಪಲಿದೆ. ಬೆಳಿಗ್ಗೆ 4.15ಕ್ಕೆ ಅಲ್ಲಿಂದ ಹೊರಟು ಬೆಳಿಗ್ಗೆ 6ಕ್ಕೆ ಮರಳಲಿದೆ.

ಮೈಸೂರು– ಬೆಂಗಳೂರು ನಡುವೆ ಅ.9ರಿಂದ ಅ.13ರವರೆಗೆ ನಿತ್ಯ ಎರಡು ವಿಶೇಷ ರೈಲುಗಳ ಸೇವೆಯನ್ನು ನಿಯೋಜಿಸಲಾಗಿದೆ. ಮೈಸೂರಿನಿಂದ ರಾತ್ರಿ 11.15, ಮಧ್ಯಾಹ್ನ 3.30, ಬೆಂಗಳೂರಿನಿಂದ ಬೆಳಿಗ್ಗೆ 3, ಮಧ್ಯಾಹ್ನ 12:15ಕ್ಕೆ ರೈಲುಗಳು ಹೊರಡಲಿವೆ.

ಮೈಸೂರು– ಕಾರವಾರ ಎಕ್ಸ್‌ಪ್ರೆಸ್‌ ರೈಲು ಮೈಸೂರನ್ನು ಅ.12ರ ರಾತ್ರಿ 9.20ಕ್ಕೆ ಬಿಡಲಿದ್ದು, ಬೆಂಗಳೂರು ಮಾರ್ಗವಾಗಿ 13ರ ಸಂಜೆ 4.15ಕ್ಕೆ ಕಾರವಾರ ತಲುಪಲಿದೆ. ಅಂದು ಸಂಜೆ 4.40ಕ್ಕೆ ಹೊರಟು ಅ.14ರ ಸಂಜೆ 4.40ಕ್ಕೆ ವಾಪಸಾಗಲಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್‌ ಧರ್ಮರಾಜ್ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.