ADVERTISEMENT

ಮೈಸೂರು ಸ್ಪರ್ಧಿಗಳ ಪಾರಮ್ಯ

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ: ಪ್ರಜ್ವಲ್‌, ಮಮತಾ ವೇಗದ ಓಟ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 7:20 IST
Last Updated 11 ಸೆಪ್ಟೆಂಬರ್ 2025, 7:20 IST
ಮಹಿಳೆಯರ ಓಟದ ಸ್ಪರ್ಧೆಯಲ್ಲಿ ಗುರಿಯತ್ತ ಮುನ್ನುಗ್ಗಿದ ಸ್ಪರ್ಧಿಗಳು
ಮಹಿಳೆಯರ ಓಟದ ಸ್ಪರ್ಧೆಯಲ್ಲಿ ಗುರಿಯತ್ತ ಮುನ್ನುಗ್ಗಿದ ಸ್ಪರ್ಧಿಗಳು   

ಮೈಸೂರು: ಮೈಸೂರು ತಾಲ್ಲೂಕಿನ ಪ್ರಜ್ವಲ್ ಮತ್ತು ಎಂ.ಮಮತಾ ಬುಧವಾರ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ 100 ಮೀಟರ್ಸ್ ಓಟದ ಗುರಿಯನ್ನು ಪ್ರಜ್ವಲ್ 11.30 ಸೆಕೆಂಡ್‌ಗಳಲ್ಲಿ ತಲುಪಿದರೆ, ಎಂ.ಮಮತಾ 13.09 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಪುರುಷರ ವಿಭಾಗದಲ್ಲಿ ಚಿರಂಜೀವಿ ಗೌಡ ದ್ವಿತೀಯ, ನಂಜನಗೂಡಿನ ಪ್ರಜ್ವಲ್ ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ನವಮಿ ದ್ವಿತೀಯ ಹಾಗೂ ಹುಣಸೂರಿನ ಮೇಘನಾ ತೃತೀಯ ಸ್ಥಾನ ಪಡೆದರು.

ಬಹುತೇಕ ಸ್ಪರ್ಧೆಗಳಲ್ಲಿ ಮೈಸೂರು ತಾಲ್ಲೂಕಿನ ಸ್ಪರ್ಧಿಗಳು ಪಾರಮ್ಯ ಮೆರೆದಿದ್ದು, ಅವರಿಗೆ ಹುಣಸೂರು, ತಿ. ನರಸೀಪುರ ಹಾಗೂ ಕೆ.ಆರ್. ನಗರ ತಾಲ್ಲೂಕುಗಳ ಸ್ಪರ್ಧಿಗಳು ಪೈಪೋಟಿ ನೀಡಿದರು.

ADVERTISEMENT

ಉದ್ಘಾಟನೆ: ಕ್ರೀಡಾಕೂಟಕ್ಕೆ ಶಾಸಕ ತನ್ವೀರ್‌ ಸೇಠ್ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ್ ಜೊತೆಗಿದ್ದರು.

ಫಲಿತಾಂಶ: ಪುರುಷರು: 200 ಮೀ. ಓಟ: ಗುರುಪ್ರಸಾದ್ (ಮೈಸೂರು)–1, ಪ್ರಜ್ವಲ್– (ಮೈಸೂರು)–2, ಭರತ್ (ಹುಣಸೂರು)–3. 400 ಮೀ. ಓಟ: ಗುರುಪ್ರಸಾದ್ (ಮೈಸೂರು)–1, ಭರತ್ ಎಚ್.ಗಿರಿಗೌಡ (ಮೈಸೂರು)–2, ಎಚ್.ಎಂ.ಹರೀಶ್; 800 ಮೀ. ಓಟ: ಎಸ್.ಶಶಾಂಕ್ ಗೌಡ (ಮೈಸೂರು)–1, ಪ್ರಶಾಂತ್ (ಕೆ.ಆರ್.ನಗರ)–2, ಅಭಿಷೇಕ್ (ಹುಣಸೂರು)–3; 1500 ಮೀ. ಓಟ: ಶಶಾಂಕ್ ಗೌಡ (ಮೈಸೂರು)–1, ಧನುಷ್ ಗೌಡ (ಕೆ.ಆರ್.ನಗರ)–2, ಎಚ್.ಕೆ. ಜೀವನ್(ಹುಣಸೂರು)–3; 5000 ಮೀ. ಓಟ: ಎಸ್.ಸುಮಂತ್ (ಮೈಸೂರು)–1, ಕೆ.ಎನ್. ನಾರಾಯಣ (ಪಿರಿಯಾಪಟ್ಟಣ)–2, ಎನ್. ವಿನೋದ್ (ಎಚ್.ಡಿ. ಕೋಟೆ)–3; 10 ಸಾವಿರ ಮೀ. ಓಟ: ಪುರುಷೋತ್ತಮ್ (ಮೈಸೂರು)–1, ಮಧುಚಂದ್ರ (ತಿ.ನರಸೀಪುರ)–2, ಪ್ರಶಾಂತ್‌ ಕುಮಾರ್ (ಪಿರಿಯಾಪಟ್ಟಣ)–3.

ಲಾಂಗ್‌ ಜಂಒ್‌: ಪೃಥ್ವಿ (ನಂಜನಗೂಡು)–1, ರಾಘವೇಂದ್ರ (ಹುಣಸೂರು)–2, ಸಚಿನ್ (ತಿ.ನರಸೀಪುರ)–3; ಹೈಜಂಪ್‌: ಜಿ. ಬಂಟಿ (ತಿ.ನರಸೀಪುರ)–1, ಅಭಿಯಾನ್ ಗೌಡ (ಮೈಸೂರು)–2,ಜೆ.ಆಕಾಶ್ (ಹುಣಸೂರು)–3; ಶಾಟ್‌ಪಟ್‌: ಮೊಹಮ್ಮದ್ ಸಕ್ಲೇನ್ ಅಹಮ್ಮದ್ (ಮೈಸೂರು)–1, ರವಿ ಪ್ರಸಾದ್ ಮೌರ್ಯ (ಕೆ.ಆರ್.ನಗರ)–2, ಎಂ.ಪಿ. ಹೇಮಂತ್ (ಸಾಲಿಗ್ರಾಮ)–3; ಟ್ರಿಪಲ್ ಜಂಪ್: ಗಣೇಶ್ ಕುಮಾರ್ (ಕೆ.ಆರ್.ನಗರ)–1, ರಮೇಶ್ ನಾಯಕ್ (ಮೈಸೂರು)–2, ರಾಘವೇಂದ್ರ (ಹುಣಸೂರು)–3; ಜಾವೆಲಿನ್‌ ಥ್ರೋ: ಎಚ್.ಎಂ. ಹರೀಶ (ಹುಣಸೂರು)–1, ಬಾಲಾಜಿ (ಎಚ್.ಡಿ.ಕೋಟೆ)–2, ಸಚಿನ್ (ತಿ.ನರಸೀಪುರ)–3; ಡಿಸ್ಕೆಸ್ ಥ್ರೋ: ಮೊಹಮ್ಮದ್ ಸಕ್ಲೇನ್ ಅಹಮ್ಮದ್ (ಮೈಸೂರು)–1, ವಿಶ್ವಾಸ್ (ಹುಣಸೂರು)–2, ಸಚಿನ್ (ತಿ.ನರಸೀಪುರ)–3; 110 ಮೀ. ಹರ್ಡಲ್ಸ್: ಎಚ್.ಎಂ. ಹರೀಶ್ (ಹುಣಸೂರು)–1, ಮೇಘ ಶ್ಯಾಮ್ (ಹುಣಸೂರು)–2, ಮಹೇಶ್ (ಕೆ.ಆರ್.ನಗರ)–3;

4 X100 ಮೀ. ರಿಲೇ: ಗುರುಪ್ರಸಾದ್, ಮೋಹಿತ್, ಪ್ರಜ್ವಲ್, ಮಿಥುನ್-1, ಸುಹಾಸ್, ವಿಕಾಸ್, ದೀಕ್ಷಿತ್, ಗಣೇಶ್ ರಾಜ್-2. ಹರೀಶ್, ಮೇಘಶ್ಯಾಮ್, ಬಸವಂತ್, ಜಸ್ವಂತ್-3; 4X400 ಮೀ. ರಿಲೇ: ದೀಪಕ್, ಭರತ್, ಅಶ್ವತ್ಥ್ ರೆಡ್ಡಿ, ಶಶಾಂಕ್-1, ಅಭಿಷೇಕ್, ರಾಘವೇಂದ್ರ, ತವನ್, ಹರ್ಷಿತ್-2, ಪುನೀತ್ ಕುಮಾರ್, ಧನುಷ್, ಕೆ.ಪಿ. ಶ್ರವಣ್, ರಾಘವ್.

ಮಹಿಳೆಯರ ವಿಭಾಗ: 200 ಮೀ. ಓಟ: ಎಂ.ಮಮತಾ (ಮೈ)–1, ಅನುಶ್ರೀ (ಹು)–2, ನವಮಿ (ಮೈ)–3; 400 ಮೀ. ಓಟ: ಮೇಘನಾ(ಹು)–1, ಕೆ.ಎಸ್.ಲಕ್ಷ್ಮೀ–2,ಅಂಜಲಿ (ಹು–3; 800 ಮೀ. ಓಟ: ಲಕ್ಷ್ಮೀ( ಮೈ)–1,ಗಾಯತ್ರಿ (ಮೈ)–2, ಮೇಘನಾ (ತಿ.ನ.)–3; 1500 ಮೀ. ಓಟ: ಗಾಯತ್ರಿ (ಮೈ)–1, ಅಭಿನಯ (ಹು), ಜಯಶ್ರೀ (ಮೈ)–3; 3000 ಮೀ. ಓಟ: ಹರ್ಷಿತಾ (ಪಿರಿಯಾಪಟ್ಟಣ)–1, ಅಶ್ವಿನಿ ಪೊಲೀಸ್(ಮೈ)–1,ಸಿಂಚನಾ (ತಿ.ನ)–3.

ಲಾಂಗ್‌ ಜಂಪ್‌; ಲೀನ್ಯಾ ಮೇರಿ (ಮೈ)–1, ದೇವಕಿ (ಮೈ)–2, ಭುವನೇಶ್ವರಿ (ಹು)–3; ಹೈಜಂಪ್‌: ಶ್ವೇತಾ (ಹು)–1, ಪ್ರಿಯಾಂಕಾ (ಮೈ), ನಿಖಿತಾ (ಮೈ)–3; ಶಾಟ್‌ಪಟ್‌: ಶಹಜಹಾನಿ (ಎಚ್.ಡಿ.ಕೋಟೆ)–1, ಶ್ರೇಯಾ (ಮೈ)–2, ಪಿ. ಭವಾನಿ (ಮೈ)–3; ಟ್ರಿಪಲ್ ಜಂಪ್: ಭುವನೇಶ್ವರಿ (ಹು)–1, ದೇವಕಿ (ಮೈ)–2, ಮೇಘನಾ (ಮೈ)–3; ಜಾವೆಲಿನ್ ಥ್ರೋ: ಶಹಜಹಾನಿ (ಎಚ್.ಡಿ.ಕೋಟೆ)–1, ಶ್ರೇಯಾ (ಮೈ), ರೇಖಾ (ಮೈಸೂರು)–3. ಡಿಸ್ಕಸ್ ಥ್ರೋ: ಸುಷ್ಮಾ (ಮೈ)–1, ದಿವ್ಯಾ (ಹು)–2, ರೂಪಶ್ರೀ (ತಿ.ನ.)–3; 100 ಮೀ. ಹರ್ಡಲ್ಸ್: ಕೆ.ಪಿ.ಯಶಸ್ವಿನಿ ( ಮೈ)–1,ಎಲ್. ಹೇಮಾ(ಹು)–2, ಗೌರಿ (ಹು)–3.

4 X100 ಮೀ. ರಿಲೇ: 1.ನವಮಿ, ದೇವಕಿ, ದೀಕ್ಷಿತಾ, ಎಂ. ಮಮತಾ(ಮೈಸೂರು)–1, ಮೇಘಾ, ಅನುಶ್ರೀ, ಎಲ್. ಹೇಮಾ, ಕೆ.ಎಸ್.ಲಕ್ಷ್ಮೀ–2,ಬಿಂದು, ಮೇಘಾ, ಪ್ರಕೃತಿ, ಪ್ರಗತಿ–3; 4X400 ಮೀ. ರಿಲೇ: ಕೆ.ಅಮೃತಾ, ಪುಣ್ಯಶ್ರೀ, ವಿ.ಸಿ.ಮಮತಾ, ಗಾಯತ್ರಿ–1,ಅಂಕಿತಾ, ಮೇಘನಾ, ಎಲ್.ಹೇಮಾ, ಲಕ್ಷ್ಮೀ–3.

ಕುಸ್ತಿ ಫಲಿತಾಂಶ
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯ 61 ಕೆ.ಜಿ. ವಿಭಾಗದಲ್ಲಿ ದಿಶಾಂತ್ ಗೌಡ ಪ್ರಥಮ ಕೆ.ಹರ್ಷ ದ್ವಿತೀಯ ಹಾಗೂ ಮೊಹಮ್ಮದ್ ಅಜನ್ ಖಾನ್ ತೃತೀಯ ಸ್ಥಾನ ಪಡೆದರು. ಫಲಿತಾಂಶ: ಪುರುಷರು: 57 ಕೆ.ಜಿ. ಫ್ರೀ ಸ್ಟೈಲ್: ಪ್ರತಾಪ್–1 ವಿವೇಕ್ ಗೌಡ–2. 65 ಕೆ.ಜಿ. ವಿಭಾಗ: ಗುರು ರಕ್ಷಣ್–1 ಆರ್.ಚರಣ್–2 ಈಶ್ವರ್ ಲೋಕೇಶ್–3; 70 ಕೆ.ಜಿ ವಿಭಾಗ: ಸಿ. ಮೋಹನ್–1 ಆರ್.ಅಶ್ವಿನ್–2 ಕೆ. ದಿಲೀಪ್–3; 74 ಕೆ.ಜಿ. ವಿಭಾಗ; ಜಿ.ಹರ್ಷವರ್ಧನ್–1 ಎಸ್. ವಿವೇಕ್–2 ಡಿ.ವಿಕಾಸ್–3; 79 ಕೆ.ಜಿ. ವಿಭಾಗ: ಆರ್. ಶಶಾಂಕ್ ರಾಜ್–1 ಮೊಹಮ್ಮದ್ ಫಯಾಜ್ ಖುರೇಷಿ–2 ಅಜಯ್–3; 86 ಕೆ.ಜಿ.: ಸಂಜಯ್ ಚಂದ್ರ–1 ಅಬ್ರಾರ್ ಹುಸೇನ್‌–2; 97 ಕೆ.ಜಿ. ವಿಭಾಗ; ಮೊಹಮ್ಮದ್–1 ಎಸ್.ಸುಜನ್–2. ಮಹಿಳಾ ವಿಭಾಗ: 50 ಕೆ.ಜಿ. ಫ್ರೀ ಸ್ಟೈಲ್‌: ಎನ್. ಯಶಸ್ವಿನಿ–1 ಲಕ್ಷ್ಮಿ–2 ಮೊನೀತಾ–3; 53 ಕೆ.ಜಿ. ವಿಭಾಗ: ಜೀವಿತಾ–1 ಸ್ವಪ್ನಾ–2; 55 ಕೆ.ಜಿ.: ಮಾನ್ಯ–1 ನಂದಿನಿ–2; 57 ಕೆ.ಜಿ. ವಿಭಾಗ: ಕೆ.ಎನ್. ನಂದಿನಿ–1 ಬಿ.ಕೆ. ಚೈತನ್ಯಾ–2. 62 ಕೆ.ಜಿ.: ಆರ್.ರೀತು–1 ದೀಕ್ಷಾ–2. 65 ಕೆ.ಜಿ. ವಿಭಾಗ: ಗೌರಿ–1 ಎಚ್.ವರ್ಷಿತಾ–2.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.