ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ನಡೆಯಲಿರುವ, ಜಂಬೂ ಸವಾರಿಯ ಅಂತ್ಯದಲ್ಲಿ ಸಿಡಿಸುವ ಕುಶಾಲತೋಪಿನ ಪೂರ್ವಭಾವಿ ತಾಲೀಮು ಎರಡನೇ ಬಾರಿಗೆ ಮಂಗಳವಾರ ಅರಮನೆಯ ಹೊರಾಂಗಣದ ವಾಹನ ನಿಲ್ದಾಣದ ಬಳಿ ನಡೆಯಿತು.
ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ತಾಲೀಮಿನಲ್ಲಿ ಭಾಗವಹಿಸಿದ್ದರು. 7 ಫಿರಂಗಿ ಗಾಡಿಗಳ ಮೂಲಕ 2 ಸುತ್ತು 14 ಕುಶಾಲತೋಪುಗಳನ್ನು ಸಿಡಿಸಲಾಯಿತು. ಸಿಡಿಮದ್ದಿನ ಸದ್ದಿಗೆ ಕುದುರೆಗಳು ಬೆಚ್ಚಿದವು. ಅಶ್ವರೋಹಿ ಪಡೆಯ ಸಿಬ್ಬಂದಿ ಕುದುರೆಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಕುಶಾಲತೋಪು ಸಿಡಿಸುವ ವೇಳೆ ಅರಮನೆ ಒಳಾಂಗಣದಲ್ಲೇ ನಿಂತಿದ್ದವು. ಹೊರಾಂಗಣದಲ್ಲಿ ಕುಶಾಲತೋಪು ಸಿಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.