ADVERTISEMENT

ಗುರುತು ಸಿಗದ ಮೃತದೇಹಗಳ ಪತ್ತೆ

ಪೊಲೀಸರೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಮೇ 2019, 19:51 IST
Last Updated 5 ಮೇ 2019, 19:51 IST

ಮೈಸೂರು: ನಗರದಲ್ಲಿ ಒಟ್ಟು ಮೂವರು ಮೃತಪಟ್ಟಿದ್ದು, ಇವರ ಗುರುತು ಪತ್ತೆಯಾಗಿಲ್ಲ. ಇವರ ಸಂಬಂಧಿಕರು ಪತ್ತೆಯಾದಲ್ಲಿ ಮಾಹಿತಿ ನೀಡಲು ಪೊಲೀಸರು ಮನವಿ ಮಾಡಿದ್ದಾರೆ.

ರೈಲ್ವೆ ನಿಲ್ದಾಣದ ಮುಂಭಾಗ ವ್ಯಕ್ತಿಯೊಬ್ಬರು ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ. 60ರಿಂದ 65 ವರ್ಷ ವಯಸ್ಸಿನ ಪುರುಷ ವ್ಯಕ್ತಿಯಾದ ಇವರು 5.6 ಅಡಿ ಎತ್ತರ ಇದ್ದಾರೆ. ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಣಕಲು ಶರೀರ, ಗಡ್ಡ ಮೀಸೆ ಬಿಟ್ಟಿದ್ದಾರೆ. ಇವರು ಬಿಳಿ ಬಣ್ಣದ ಅರ್ಧ ತೋಳಿನ ಒಂದು ಟೀ ಷರ್ಟು, ನೀಲಿ ಬಣ್ಣದ ಒಂದು ಪ್ಯಾಂಟ್ ಧರಿಸಿದ್ದಾರೆ.

ಮಂಡಿ ಮೊಹಲ್ಲಾದ ಮೀನಾಬಜಾರ್‌ನ ಜಂಜಂ ಬಜಾರ್ ಸಮೀಪ ಅನಾರೋಗ್ಯ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮಂಡಿ ಠಾಣೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದೇ ಇವರು ಮೃತಪಟ್ಟಿದ್ದಾರೆ. 45 ವರ್ಷ ವಯಸ್ಸಿನ ಪುರುಷ ವ್ಯಕ್ತಿಯಾದ ಇವರು 5.6 ಅಡಿ ಎತ್ತರ ಇದ್ದಾರೆ. ಕೋಲು ಮುಖ, ಸಣಕಲು ಶರೀರ, ಎಣ್ಣೆಗೆಂಪು ಮೈಬಣ್ಣ, ಕಪ್ಪು ತಲೆ ಕೂದಲು ಹಾಗೂ ಗಡ್ಡಮೀಸೆ ಬಿಟ್ಟಿರುತ್ತಾರೆ. ಇವರು ಕಪ್ಪುಬಣ್ಣದ ಒಂದು ಪ್ಯಾಂಟ್ ಮಾತ್ರ ಧರಿಸಿದ್ದಾರೆ. ಇವರ ಎಡ ಕಿಬ್ಬೊಟ್ಟೆ ಮೇಲೆ ಕಪ್ಪು ಸಣ್ಣ ಕಾರೆಹರಳಿನ ಗುರುತು ಇದೆ.

ADVERTISEMENT

‌ಈ ಇಬ್ಬರ ಗುರುತು ಪತ್ತೆಯಾದವರು ಮಂಡಿ ಠಾಣೆಯ ದೂ: 0821– 2418339, 2418313 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುತು ಸಿಗದ ಮಹಿಳೆ ಸಾವು

ಚಿಗುರು ಸಂಸ್ಥೆಯ ಆಶ್ರಮದಲ್ಲಿದ್ದ 70 ವರ್ಷ ವಯಸ್ಸಿನ ಮಹಿಳೆಯೊಬ್ಬರು ಅನಾರೋಗ್ಯದಿಂದ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಒಂದೂವರೆ ವರ್ಷದ ಹಿಂದೆ ರಸ್ತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಸರಸ್ವತಿಪುರಂ ಠಾಣೆ ಪೊಲೀಸರು ಚಿಕಿತ್ಸೆ ಕೊಡಿಸಿ ಸಂಸ್ಥೆಯ ಆಶ್ರಮಕ್ಕೆ ಸೇರಿಸಿದ್ದರು.

ಇವರು 5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ, ಬಿಳಿ ತಲೆಗೂದಲನ್ನು ಹೊಂದಿದ್ದಾರೆ. ಇವರ ಹೆಸರೂ ಸಹ ತಿಳಿದು ಬಂದಿಲ್ಲ. ಇವರ ಗುರುತು ಪತ್ತೆಯಾದವರು ದೂ: 0821–2418339, 2418117 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.