ಎಚ್.ಡಿ.ಕೋಟೆ: ಪಟ್ಟಣದ ಹ್ಯಾಂಡ್‌ಪೋಸ್ಟ್ ಘಟಕದ ವಲಯ ಅರಣ್ಯಾಧಿಕಾರಿಗಳ ಎಸ್‌ಟಿಪಿಎಫ್ ತಂಡ ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶನಿವಾರ ಬಂಧಿಸಿದೆ.
ಪಟ್ಟಣದ ವಿದ್ಯಾನಗರದ ನಿವಾಸಿ ಎಂ.ಕುಮಾರ ಬಿನ್ ಮರಿಶೆಟ್ಟಿ (36) ಬಂಧಿತ ಆರೋಪಿ. ಪಟ್ಟಣದ ಉಪ ನೊಂದಣಾಧಿಕಾರಿ ಕಚೇರಿಯ ಮುಂಭಾಗವಿರುವ ಟೀ ಅಂಗಡಿಯ ಹತ್ತಿರ ಚಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ.
ವಲಯ ಅರಣ್ಯಾಧಿಕಾರಿ ರಾಮಾಂಜನೇಯಲು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿಆರ್‌ಎಫ್‌ಒಗಳಾದ ವಿನೋದ್, ಜ್ಯೋತಿ ಶಿವಕುಮಾರ್, ಅಪ್ಪಣ್ಣಕಾಂಬ್ಳೆ, ಸಂತೋಷ್ ಕಮಣೂರೆ, ವಲಯದ ಡಿಆರ್‌ಎಫ್‌ಓ ಮಹೇಶ್, ಮಲ್ಲಿಕಾರ್ಜುನ್, ಸುರೇಶ ಕಲ್ಲಪ್ಪ ಪೂಜಾರಿ, ನಿಂಗರಾಜು, ಉಮೇಶ, ಬೋಳ, ಕವಿನ, ಕಾಳ, ನಾಗೇಂದ್ರ, ಅರ್ಚನ ಚಾಲಕ ಆದಿತ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.