ADVERTISEMENT

ರಾಮ ಮಂದಿರ ನಿರ್ಮಾಣ: ಸಕಲ ಪ್ರಯತ್ನ

ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ: ಬಿಜೆಪಿ ಕಾರ್ಯಕರ್ತರ ಸಂಭ್ರಮ, ರಾಮದಾಸ್‌ ಮನವಿ

​ಪ್ರಜಾವಾಣಿ ವಾರ್ತೆ
Published 31 ಮೇ 2019, 10:14 IST
Last Updated 31 ಮೇ 2019, 10:14 IST
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರದ ಅಂಗವಾಗಿ ಶಾಸಕ ಎಸ್‌.ಎ.ರಾಮದಾಸ್‌ ಗೋ ಪೂಜೆ ನೆರವೇರಿಸಿದರು. ಜಿಎಸ್‌ಎಸ್‌ ಯೋಗಿಗ್‌ ಫೌಂಡೇಶನ್‌ ಸಂಸ್ಥಾಪಕ ಶ್ರೀಹರಿ, ಹೋಟೆಲ್‌ ಮಾಲೀಕರ ಸಂಘದ ಬಿ.ಎಸ್‌.ಪ್ರಶಾಂತ್‌, ಪಾಲಿಕೆ ಸದಸ್ಯರು ಇದ್ದಾರೆ
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರದ ಅಂಗವಾಗಿ ಶಾಸಕ ಎಸ್‌.ಎ.ರಾಮದಾಸ್‌ ಗೋ ಪೂಜೆ ನೆರವೇರಿಸಿದರು. ಜಿಎಸ್‌ಎಸ್‌ ಯೋಗಿಗ್‌ ಫೌಂಡೇಶನ್‌ ಸಂಸ್ಥಾಪಕ ಶ್ರೀಹರಿ, ಹೋಟೆಲ್‌ ಮಾಲೀಕರ ಸಂಘದ ಬಿ.ಎಸ್‌.ಪ್ರಶಾಂತ್‌, ಪಾಲಿಕೆ ಸದಸ್ಯರು ಇದ್ದಾರೆ   

ಮೈಸೂರು: ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಬೇಕು. ಆರು ತಿಂಗಳೊಳಗೆ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಶಾಸಕ ಎಸ್‌.ಎ.ರಾಮದಾಸ್‌ ಇಲ್ಲಿ ಮನವಿ ಮಾಡಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರ ಅಭಿಲಾಷೆಯಂತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದು ಸಂತಸದ ವಿಷಯ. ಮೋದಿ ಅವರು ಪ್ರಮಾಣ ವಚನದ ಜೊತೆಗೆ 1,000 ದಿನಗಳ ಕಾರ್ಯ ಯೋಜನೆಯನ್ನು ಪ್ರಕಟಿಸಿರುವುದು ಅವರ ಬದ್ಧತೆಗೆ ಹಿಡಿದ ಕನ್ನಡಿ’ ಎಂದು ಹೇಳಿದರು.

ADVERTISEMENT

ಪಕ್ಷದ ವತಿಯಿಂದ ದಿನಕ್ಕೊಂದು ಗಿಡದಂತೆ ಪ್ರತಿ ಭಾನುವಾರ ಕೆ.ಆರ್‌.ಕ್ಷೇತ್ರದಲ್ಲಿ ಗಿಡ ನೆಡಲಾಗುವುದು. ಜತೆಗೆ ಸ್ವಚ್ಛತಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಗೋ ಪೂಜೆ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.