ADVERTISEMENT

ಎಚ್.ಡಿ. ಕೋಟೆ: ಸಿ.ಎಂ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯ

ಉತ್ತರಪ್ರದೇಶ ಅತ್ಯಾಚಾರ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:25 IST
Last Updated 9 ಅಕ್ಟೋಬರ್ 2020, 6:25 IST
ಎಚ್.ಡಿ. ಕೋಟೆ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ತಾಲ್ಲೂಕು ನಾಯಕ ಸಂಘ ಮತ್ತು ಶಾಸಕ ದಿವಂಗತ ಎಸ್.ಚಿಕ್ಕಮಾದು ಅಭಿಮಾನಿ ಸಂಘದ ವತಿಯಿಂದ ಉತ್ತರಪ್ರದೇಶ ರಾಜ್ಯದಲ್ಲಿ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಮಾಡಿರುವ ಕಿಡಿಗೇಡಿಗಳನ್ನು ನೇಣುಗಂಬಕ್ಕೆ ಏರಿಸುವಂತೆ ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಎಚ್.ಡಿ. ಕೋಟೆ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ತಾಲ್ಲೂಕು ನಾಯಕ ಸಂಘ ಮತ್ತು ಶಾಸಕ ದಿವಂಗತ ಎಸ್.ಚಿಕ್ಕಮಾದು ಅಭಿಮಾನಿ ಸಂಘದ ವತಿಯಿಂದ ಉತ್ತರಪ್ರದೇಶ ರಾಜ್ಯದಲ್ಲಿ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಮಾಡಿರುವ ಕಿಡಿಗೇಡಿಗಳನ್ನು ನೇಣುಗಂಬಕ್ಕೆ ಏರಿಸುವಂತೆ ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.   

ಎಚ್.ಡಿ. ಕೋಟೆ: ಉತ್ತರಪ್ರದೇಶದಲ್ಲಿ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಮಾಡಿರುವ ಕಿಡಿಗೇಡಿಗಳನ್ನು ನೇಣುಗಂಬಕ್ಕೆ ಏರಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ತಾಲ್ಲೂಕು ನಾಯಕ ಸಂಘ ಮತ್ತು ಎಸ್.ಚಿಕ್ಕಮಾದು ಅಭಿಮಾನಿ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿನ್ನಹಳ್ಳಿ ರಾಜನಾಯಕ ಮಾತನಾಡಿ, ‘ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮೂಹಿಕ ಅತ್ಯಾಚಾರ ಮಾಡಿರುವ ಕಿಡಿಗಳನ್ನು ರಕ್ಷಣೆ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶದ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು. ಯೋಗಿ ಆದಿತ್ಯನಾಥ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಅತ್ಯಾಚಾರ ಮಾಡಿರುವ ಕಿಡಿಗೇಡಿಗಳನ್ನು ರಕ್ಷಣೆ ಮಾಡಲು ಹುನ್ನಾರ ನಡೆದಿದೆ. ಆದ್ದರಿಂದ ಪ್ರಧಾನ ಮಂತ್ರಿ ಮತ್ತು ಉತ್ತರಪ್ರದೇಶದ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಆರ್.ಮಂಜುನಾಥ್‌ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷ ಎಚ್.ಎಲ್. ಶಂಭುಲಿಂಗ ನಾಯಕ, ಸಿಪಿಎಂ ಶಿವಣ್ಣ, ಕ್ಯಾತನಹಳ್ಳಿ ನಾಗರಾಜು, ರಾಜನಾಯಕ, ಪುರಸಭಾ ಸದಸ್ಯ ಪುಟ್ಟಬಸವನಾಯಕ, ತಾ. ಪಂ. ಸದಸ್ಯ ಅಂಕನಾಯ್ಕ, ಬಿ.ಸಿ. ರಾಜು ಕೋಟೆ ದಾಸನಾಯಕ, ಶೇಖರ ಹೆಗ್ಗಡಪುರ, ಶ್ರೀನಿವಾಸ್, ಸಿದ್ದನಾಯಕ, ಕೃಷ್ಣನಾಯಕ, ಹಿಟ್ನ ಬೆಟ್ಟನಾಯಕ, ಇಟ್ನರಾಜಣ್ಣ, ರಾಜು, ಸೋಮಣ್ಣ, ರಂಗನಾಯಕ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.