ಮುನಿಗೋಪಾಲರಾಜು
ಮೈಸೂರು: ‘ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆ ವಿದ್ಯುತ್ ಸುರಕ್ಷತಾ ಕ್ರಮ
ಗಳನ್ನು ಅನು ಸರಿಸಬೇಕು’ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕೋರಿದೆ.
‘ಹಬ್ಬದಲ್ಲಿ ಅನೇಕರು ಮನೆ ಹಾಗೂ ಅಂಗಡಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುತ್ತಾರೆ. ಈ ವೇಳೆ, ಸೀರಿಯಲ್ ಲೈಟ್‌ಗಳನ್ನು ಮತ್ತು ವಿದ್ಯುತ್ ತಂತಿಗಳನ್ನು ನೀರಿನಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಪ್ಲಗ್ ಪಾಯಿಂಟ್‌ಗಳ ಮೇಲೆ ಅತಿಯಾದ ಲೋಡ್ ಹಾಕಬಾರದು. ಹಣತೆ ಅಥವಾ ದೀಪಗಳನ್ನು ಕೇಬಲ್‌ಗಳು, ವಿದ್ಯುತ್ ತಂತಿಗಳು ಹಾಗೂ ಪ್ಲಗ್‌ಗಳಿಂದ ದೂರದಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ರಾಜು ತಿಳಿಸಿದ್ದಾರೆ.
‘ಪಟಾಕಿ ಹಚ್ಚುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಅಥವಾ ಪರಿವರ್ತಕಗಳಿಂದ ದೂರದ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ವಿದ್ಯುತ್ ಉಪಕರಣಗಳಿಂದ ಮಕ್ಕಳನ್ನು ದೂರವಿರಿಸಬೇಕು. ವಿದ್ಯುತ್ ಸಮಸ್ಯೆಗಳು ಅಥವಾ ಅವಘಡಗಳು ಸಂಭವಿಸಿದಲ್ಲಿ ಗ್ರಾಹಕ ಸಹಾಯವಾಣಿ 1912 ಕರೆ ಮಾಡಬೇಕು’ ಎಂದು
ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.