ADVERTISEMENT

ದೊಡ್ಡವರ ಹೇಳಿಕೆಗೆ ನಾನೇನು ಪ್ರತಿಕ್ರಿಯಿಸಲಿ?: ರಾಜಣ್ಣಗೆ ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 12:34 IST
Last Updated 12 ಫೆಬ್ರುವರಿ 2025, 12:34 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಮೈಸೂರು:  ‘ಅವರು ಪಕ್ಷದ ಹಿರಿಯ ನಾಯಕರು. ನಾನೇನು ಪ್ರತಿಕ್ರಿಯಿಸಲಿ’ ಎಂದು ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗಾಗಿ ದೆಹಲಿಗೆ ಹೋಗುತ್ತಿದ್ದೇನೆ’ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬುಧವಾರ ಇಲ್ಲಿ ಪ್ರತಿಕ್ರಿಯಿಸಿದರು.

‘ನಮ್ಮ ಮೆಟ್ರೊ ರೈಲು ಪ್ರಯಾಣ ದರ ಹೆಚ್ಚಳ ಸೇರಿದಂತೆ ಎಲ್ಲದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ದರ ಹೆಚ್ಚಳ ಕೇಂದ್ರ ಸರ್ಕಾರದ ವಿಚಾರ. ಕಡಿಮೆ ಮಾಡುವುದು ನಮ್ಮ ಕೈಯಲ್ಲಿಲ್ಲ’ ಎಂದರು.

‘ಮುಖ್ಯಮಂತ್ರಿ ಬರಲಾಗುವುದಿಲ್ಲ ಎಂದಿದ್ದರಿಂದ, ಪ್ರಯತ್ನಕ್ಕಿಂತ ಪ್ರಾರ್ಥನೆಯ ಫಲ ಜಾಸ್ತಿ ಎಂದು ತಿರುಮಕೂಡಲು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೇನೆ. ಪ್ರಯಾಗ್‌ರಾಜ್‌– ತ್ರಿವೇಣಿ ಸಂಗಮದ ಸ್ನಾನದಲ್ಲಿ ವ್ಯತ್ಯಾಸವೇನೂ ಕಾಣಲಿಲ್ಲ. ಇಲ್ಲಿನ ನೀರು ಪರಿಶುದ್ಧ ಹಾಗೂ ಪವಿತ್ರವಾಗಿದೆ. ಈ ಸ್ಥಳವನ್ನು ಅಭಿವೃದ್ಧಿಪಡಿಸಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.